ಚಾಮರಾಜನಗರ: ಕುಡಿಯುವ ನೀರಿಗಾಗಿ ಸಿಎಂಗೆ ಮಕ್ಕಳು ಪತ್ರ ಬರೆದ ಘಟನೆ ನಡೆದಿದೆ. ನಮ್ಮೂರಲ್ಲಿ ನೀರಿಲ್ಲ, ಮಳೆ ಬಂದು ತುಂಬಾ ದಿನಗಳಾಯ್ತು ಎಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ತಂದೆ-ತಾಯಿ ನೀರಿಲ್ಲದೇ ದೂರ ಹೋಗಿ ಕೆಲಸ ಮಾಡ್ತಾರೆ. ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಸಿಗ್ತಿಲ್ಲ ಎಂದು ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾ.ಪಂ. ವ್ಯಾಪ್ತಿಯ ಕೆಂಪಯ್ಯನಹಟ್ಟಿ ಗ್ರಾಮದ ವಿದ್ಯಾರ್ಥಿನಿ ವರ್ಣಿಕಾ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು
ರಾಜ್ಯದಲ್ಲೆಡೆ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ಚಾಮರಾಜನಗರ ಜಿಲ್ಲೆಯ ರಾಮಾಪುರ ಹೋಬಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿತವಾಗಿದೆ. ಕೃಷಿ ಬಿಟ್ಟು ವಲಸೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ತಂದೆ-ತಾಯಿಗಳ ಪರಿಸ್ಥಿತಿಗೆ ಮನನೊಂದು ಸಿಎಂಗೆ ಮಕ್ಕಳು ಪತ್ರ ಬರೆದಿದ್ದಾರೆ.
ನದಿ ಮೂಲದಿಂದ ಕೆರೆಕಟ್ಟೆಗಳನ್ನು ತುಂಬಿಸಲು ಮಕ್ಕಳು ಮನವಿ ಮಾಡಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಮೂಲಕ ನೀರು ಪೂರೈಸಲು ಮನವಿ ಮಾಡಿಕೊಂಡಿದ್ದಾರೆ. ಪತ್ರ ಬರೆದು ಸಿಎಂಗೆ ಕೂಡ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಕುಡುಪು ಮೈದಾನದಲ್ಲಿ ಹತ್ಯೆಯಾಗಿದ್ದ ಅಶ್ರಫ್ ಕುಟುಂಬಸ್ಥರ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ