ಚಾಮರಾಜನಗರ: ಜನರ ಸೆಲ್ಫಿ ಕ್ರೇಜ್‍ನಿಂದ ಹಾನಿಯಾಗುತ್ತಿದ್ದ ಬೆಳೆಯ ನಷ್ಟವನ್ನು ಭರಿಸಲು ರೈತರು ಮಾಸ್ಟರ್ ಪ್ಲಾನೊಂದನ್ನು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಜನರ ಸೆಲ್ಫಿ ಕ್ರೇಜ್ ಗೆ ತುತ್ತಾಗುತ್ತಿತ್ತು. ಇದೀಗ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳುವವರ ಬಳಿ 10 ರೂಪಾಯಿಯನ್ನು ವಸೂಲಿ ಮಾಡುತ್ತಿದ್ದಾರೆ.
Advertisement
ಗುಂಡ್ಲುಪೇಟೆಯ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹುತೇಕ ಕೇರಳಿಗರು ಸಂಚಾರ ಮಾಡುತ್ತಾರೆ. ಸೂರ್ಯಕಾಂತಿ ಹೂ ನೋಡಿ ಸೆಲ್ಫಿ ತೆಗದುಕೊಳ್ಳಲು ಜಮೀನಿಗೆ ಬಂದು ಸೂರ್ಯಕಾಂತಿ ಗಿಡಗಳನ್ನು ಮುರಿದು ಹಾಕುತ್ತಿದ್ದರು. ಇದರಿಂದ ಇಲ್ಲಿನ ರೈತರಿಗೆ ಸಾಕಷ್ಟು ನಷ್ಟವಾಗುತ್ತಿತ್ತು.
Advertisement
ಹೀಗಾಗಿ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳಲು ಬರುವ ಕೇರಳ ಪ್ರವಾಸಿಗರಿಂದ 10 ರೂಪಾಯಿಯನ್ನು ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ಒಂದು ಕಡೆ ತಮ್ಮ ಬೆಳೆಯನ್ನು ಕಾಯುವುದರ ಜೊತೆಗೆ 10 ರೂಪಾಯಿ ರೂಪದಲ್ಲಿ ವರಮಾನವು ಬಂದಂತೆ ಆಗುತ್ತಿದೆ.
Advertisement