ಮೈಸೂರು: ಚಾಮರಾಜನಗರ ಸುಳ್ವಾಡಿಯ ಕಿಚ್‍ಗುತ್ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 120 ಮಂದಿ 17 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಈ ಎಲ್ಲಾ ಆಸ್ಪತ್ರೆಗಳ ಬಿಲ್ ಇದೀಗ 1.27 ಕೋಟಿಉ ರೂಪಾಯಿ ಆಗಿದೆ.
ಪ್ರಸಾದ ಸೇವಿಸಿ 17 ಜನ ಮೃತಪಟ್ಟಿದ್ದು, 120ಕ್ಕೂ ಹೆಚ್ಚು ಮಂದಿಗೆ ಮೈಸೂರಿನ 12 ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಿದ್ದವು. ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ ಬಿಲ್ ಮೊತ್ತದ ದಾಖಲೆಗಳನ್ನು ಚಾಮರಾಜನಗರ ಜಿಲ್ಲಾಡಳಿತ ಸರ್ಕಾರಕ್ಕೆ ರವಾನಿಸಿದೆ. ಆದರೆ ಇಷ್ಟೊಂದು ಬಿಲ್ ಪಾವತಿಸಲು ಕಷ್ಟಸಾಧ್ಯ ಎಂದು ಬಿಲ್ ಮೊತ್ತ ಕಡಿಮೆಗೆ ಮಾತುಕತೆ ನಡೆಸಿ ಎಂದು ಮೈಸೂರು ಹಾಗೂ ಚಾಮರಾನಗರ ಎರಡೂ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚಿಸಿದೆ.
Advertisement
Advertisement
ಮೈಸೂರಿನ ಜೆಎಸ್‍ಎಸ್, ನಾರಾಯಣ ಹೃದಯಾಲಯ ಅಪೋಲೋ, ಗೋಪಲಾಗೌಡ, ಸುಯೋಗ್, ಭಾನವಿ, ಬೃಂದಾವನ, ಕಾವೇರಿ ಹಾಗೂ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಒಟ್ಟು 12 ಆಸ್ಪತ್ರೆಗಳಿಂದ 1.27 ಕೋಟಿ ರೂ. ಬಿಲ್ ಆಗಿದೆ.
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜೈಲಿನಲ್ಲಿರುವ ಆರೋಪಿಗಳನ್ನು ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತ್ತು. ನ್ಯಾಯಾಂಗ ಬಂಧನವನ್ನ ಫೆಬ್ರವರಿ 26ರವರೆಗೆ ವಿಸ್ತರಿಸಿ ವಿಚಾರಣೆ ಮುಂದೂಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv