Connect with us

ಭಾಗ್ಯಲಕ್ಷ್ಮಿ ಬಾಂಡ್ ಸ್ಕೀಂನಿಂದ ಬೇಸತ್ತ ಚಾಮರಾಜನಗರ ಜನ- ದಿನವೂ ಸರ್ಕಾರಿ ಕಚೇರಿಗೆ ಅಲೆದಾಟ

ಭಾಗ್ಯಲಕ್ಷ್ಮಿ ಬಾಂಡ್ ಸ್ಕೀಂನಿಂದ ಬೇಸತ್ತ ಚಾಮರಾಜನಗರ ಜನ- ದಿನವೂ ಸರ್ಕಾರಿ ಕಚೇರಿಗೆ ಅಲೆದಾಟ

ಚಾಮರಾಜನಗರ: ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮದುವೆ ಖರ್ಚಿಗೆ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು 2006 ಹಾಗೂ 2007ನೇ ಸಾಲಿನಲ್ಲಿ ಬಿಜೆಪಿಯ ಯಡಿಯೂರಪ್ಪ ನೇತೃತ್ವದ ಸರ್ಕಾರ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತ್ತು.

ಆದರೆ ಆ ಯೋಜನೆ ಎಷ್ಟರ ಮಟ್ಟಿಗೆ ಫಲಾನುಭವಿಗಳಿಗೆ ಲಭ್ಯವಾಗುತ್ತಿದೆ ಎಂದು ಮಾತ್ರ ಯೋಚನೆ ಮಾಡಿಲ್ಲ. ಇದೀಗ ಕಳೆದ ಹತ್ತು ವರ್ಷಗಳಿಂದಲೂ ಹೆಣ್ಣು ಮಕ್ಕಳನ್ನು ಹೆತ್ತ ತಂದೆ-ತಾಯಿಗಳು ಈ ಭಾಗ್ಯ ಲಕ್ಷ್ಮಿ ಯೋಜನೆಯ ಬಾಂಡನ್ನು ತೆಗೆದುಕೊಳ್ಳಲು ಪ್ರತಿ ನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಯೋಜನೆಯ ಫಲಾನುಭವಿಗಳಾದ ಚಾಮರಾಜನಗರ ಜಿಲ್ಲೆಯ ಸಾವಿರಾರು ಮಂದಿ ತಮ್ಮ ಹೆಣ್ಣು ಮಕ್ಕಳಿಗೆ ಬಂದಿರುವ ಬಾಂಡ್‍ಗಳನ್ನು ಪಡೆಯಲು ಅವರಿವರನ್ನು ವಿಚಾರಿಸುತ್ತಾ, ತಾವು ಯೋಜನೆಗೆ ಅರ್ಹರಾಗಿರುವ ಚೀಟಿಗಳನ್ನು ಹಿಡಿದುಕೊಂಡು ಅಧಿಕಾರಿಗಳ ಪ್ರತಿ ನಿತ್ಯ ಹೋಗಿ ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದಾರೆ.

Advertisement
Advertisement