ಚಾಮರಾಜನಗರ: ಫೋನ್ ಕದ್ದಾಲಿಕೆ ಬಹುದೊಡ್ಡ ಅಪರಾಧವಾಗಿದೆ. ಫೋನ್ ಕದ್ದಾಲಿಕೆಯಾಗಿದ್ದರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಯಲಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಇಂದು ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಫೋನ್ ಕದ್ದಾಲಿಕೆಗೆ ಕುಮಾರಸ್ವಾಮಿ ಅವರು ಹೊಣೆಗಾರರು ಅನ್ನೋದನ್ನು ನಾನು ಕೇಳಿದ್ದೇನೆ. ಆದ್ದರಿಂದ ಅವರ ವಿರುದ್ಧ ತನಿಖೆಯಾಗಲಿ ಎಂದು ಹೇಳಿದ್ದಾರೆ.
Advertisement
Advertisement
ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಈ ವಿಚಾರ ಪಾರ್ಲಿಮೆಂಟಿನಲ್ಲಿ ಚರ್ಚೆ ನಡೆದಿತ್ತು. ಈಗ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ವಿರುದ್ಧ ಆರೋಪ ಮಾಡುವ ಬದಲು ಚರ್ಚೆ ನಡೆದು ಪ್ರಕರಣದ ತನಿಖೆಯಾಗಲಿ. ಈ ವಿಚಾರವಾಗಿ ಇದೀಗ ರಾಜ್ಯ ಸರ್ಕಾರ ಯಾವ ರೀತಿ ತನಿಖೆ ಕೈಗೊಳ್ಳುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
Advertisement
Advertisement
ಈ ರೀತಿಯ ಪ್ರಕರಣ ರಾಜ್ಯದಲ್ಲಿ ಆಗಬಾರದಿತ್ತು. ತನಿಖೆ ನಂತರ ಸತ್ಯಾಂಶ ಹೊರಬರುತ್ತದೆ. ಯಾವ ರೀತಿ ತನಿಖೆ ಮಾಡುತ್ತಾರೆ ನೋಡೋಣ ಎಂದು ಹೇಳಿ ಕದ್ದಾಲಿಕೆ ಬಗ್ಗೆ ಸಮಗ್ರ ತನಿಖೆಗೆ ಶ್ರೀನಿವಾಸ್ ಪ್ರಸಾದ್ ಆಗ್ರಹಿಸಿದರು.