ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಗುಮ್ಮಕಲ್ಲುಗುಡ್ಡ ಗಣಿ ಕುಸಿತ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಎನ್‍ಡಿಆರ್‌ಎಫ್ ಪಡೆಗಳು ಹರಸಾಹಸ ಮಾಡಿ ಈವರೆಗೂ ಒಬ್ಬರ ಶವ ಹೊರ ತೆಗೆದಿದ್ದಾರೆ.
Advertisement
ನಿನ್ನೆ ಬಂಡೆಯಡಿ 4 ಗಂಟೆಗೂ ಹೆಚ್ಚು ಕಾಲ ಸಿಲುಕಿ ಬದುಕುಳಿದಿದ್ದ ನೂರುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಬೃಹತ್ ಕಲ್ಲುಗಳ ಅಡಿ ಇನ್ನೂ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಆದರೆ ನಿನ್ನೆ ಗುಡ್ಡ ಕುಸಿತ ವೇಳೆ 20ಕ್ಕೂ ಹೆಚ್ಚು ಕಾರ್ಮಿಕರಿದ್ದರು ಅಂತ ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕ್ವಾರಿಯಲ್ಲಿ ಗುಡ್ಡ ಕುಸಿತ- ಮೂವರ ವಿರುದ್ಧ ಕೇಸ್ ದಾಖಲು
Advertisement
Advertisement
ಗಣಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ, ಉಪಗುತ್ತಿಗೆ ಪಡೆದಿದ್ದ ಹಕೀಂ, ಗಣಿ ನೋಡಿಕೊಳ್ಳುತ್ತಿದ್ದ ನವೀದ್ ವಿರುದ್ಧ ಗಣಿ, ಭೂ ವಿಜ್ಞಾನ ಇಲಾಖೆ ದೂರು ದಾಖಲಿಸಿದೆ. ಮೂವರ ಪೈಕಿ ನವೀದ್‍ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗುಡ್ಡ ಕುಸಿತ – ಇಬ್ಬರು ಗಣಿ ಕಾರ್ಮಿಕರು ಸಾವು?
Advertisement
ಈ ನಡುವೆ ನಾಳೆಯಿಂದ ಒಂದು ತಿಂಗಳು ಚಾಮರಾಜನಗರದ ಎಲ್ಲಾ ಕ್ವಾರಿಗಳ ಸ್ಥಗಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚಿಸಿದರು. ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ವೇಳೆ ಸಚಿವರಿಗೆ ಸ್ಥಳೀಯರು ತರಾಟೆ ತೆಗೆದುಕೊಂಡರು. ಸಚಿವರ ಕಾರ್‌ಗೆ ಅಡ್ಡ ಮಲಗಲು ನೋಡಿದ ಆಕ್ರೋಶಿತನೊಬ್ಬನನ್ನು ಪೊಲೀಸರು ಹೊತ್ತೊಯ್ಯಬೇಕಾಯ್ತು.