ಚಾಮರಾಜನಗರ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳ ಎನ್‍ಕೌಂಟರ್ ವಿಚಾರ ಎಲ್ಲಾ ಕಡೆ ಪ್ರತಿಧ್ವನಿಸುತ್ತಿದ್ದು, ಇದೀಗ ಎಸ್‍ಪಿಯೊಬ್ಬರು ಬೈಕ್ ಕಳ್ಳರಿಗೆ ಎನ್ ಕೌಂಟರ್ ಮಾಡಬೇಕೆಂದು ಅವಾಜ್ ಹಾಕಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಕೊಳ್ಳೇಗಾಲ ಪೊಲೀಸರು ಮೂವರು ಖದೀಮರನ್ನು ಬಂಧಿಸಿ ಒಂಬತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬೈಕ್ ಕಳ್ಳರ ವಿಚಾರಣೆ ವೇಳೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಗರಂ ಆಗಿದ್ದು, ಆಂಧ್ರದಲ್ಲಿ ಎನ್‍ಕೌಂಟರ್ ಮಾಡಿದಂತೆ ನಿಮ್ಮನ್ನೂ ಎನ್‍ಕೌಂಟರ್ ಮಾಡಬೇಕು ಎಂದು ಅವಾಜ್ ಹಾಕಿದ್ದಾರೆ.
Advertisement
Advertisement
ಅಪ್ಪ-ಅಮ್ಮನಿಗೂ ಕೆಟ್ಟ ಹೆಸರು ತರ್ತೀರಾ, ಸಾಲಸೋಲ ಮಾಡಿ ಬೈಕ್ ತಗೊಂಡಿರುವವರಿಗೂ ಹಿಂಸೆ ಕೊಡುತ್ತೀರಿ. ಸ್ವಲ್ಪನೂ ಫೀಲಿಂಗ್ಸೆ ಇಲ್ಲ, ಏನ್ ಶಾ….ವ್ಯಾಪಾರ ಮಾಡ್ತೀಯಾ, ಬೋ…ಮಗನೇ ಎಂದು ಬೈಕ್ ಕಳ್ಳರನ್ನು ಎಸ್‍ಪಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ; ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ
Advertisement
ಎಸ್ ಪಿ ಆನಂದ್ ಕುಮಾರ್ ಅವರು ಈ ಹಿಂದೆ ರೌಡಿಶೀಟರ್ ಪರೇಡ್ ವೇಳೆ ರೌಡಿಶೀಟರ್ ಗೆ ಕಪಾಳಮೋಕ್ಷ ಮಾಡಿದ್ದರು.