ಚಾಮರಾಜನಗರ: ಕೊಳ್ಳೇಗಾಲದ ಜ್ಯೋತಿಷಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ 20 ಲಕ್ಷ ರೂ. ಸೂಲಿಗೆ ಮಾಡಿದ್ದ ಖರೀಮರನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಹೆಸರುಘಟ್ಟ ನಿವಾಸಿಗಳಾದ ಸರೋಜಮ್ಮ, ರತ್ನಮ್ಮ, ಬಸವರಾಜು ಬಂಧಿತ ಆರೋಪಿಗಳಾಗಿದ್ದು, ಖ್ಯಾತ ಜ್ಯೋತಿಷಿ ರಾಘವನ್ ಗುರಿಯಾಗಿಸಿ ಹನಿಟ್ರ್ಯಾಪ್ ನಡೆಸಿ ಬಲೆಗೆ ಬೀಳಿಸಿದ್ದರು.
ಜ್ಯೋತಿಷಿ ರಾಘವನ್ ಸರೋಜಮ್ಮಳೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಆರೋಪಿಗಳು ಬ್ಲಾಕ್ ಮೇಲ್ ಮಾಡುಲು ಆರಂಭಿಸಿದ್ದರು. ಅಲ್ಲದೇ ಸುಮಾರು 20 ಲಕ್ಷ ರೂ. ಸುಲಿಗೆ ಮಾಡಿ, ಇನ್ನೂ 50 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು.
ಆರೋಪಿಗಳ ಕಿರುಕುಳದಿಂದ ಬೇಸತ್ತ ರಾಘವನ್ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.