ಚಾಮರಾಜನಗರ: ಗುಜರಾತ್ (Gujarat) ಮೂಲದ ಗಣಿ ಉದ್ಯಮಿಯಿಂದ ಗಣಿ ಜಮೀನನ್ನು ಖರೀದಿಸಿ ನೀಡಬೇಕಾಗಿದ್ದ ಹಣದಲ್ಲಿ 9 ಕೋಟಿ ರೂ. ವಂಚಿಸಿರುವ (Fraud) ಆರೋಪ ಚಾಮರಾಜನಗರದ (Chamarajanagar) ಶಾಸಕ ಪುಟ್ಟರಂಗಶೆಟ್ಟಿ (Puttarangashetty) ವಿರುದ್ಧ ಮಾಡಲಾಗಿದೆ. ಶಾಸಕರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಗುಜರಾತ್‌ನ ಗಣಿ ಉದ್ಯಮಿ ಕಮಲೇಶ್, ನನ್ನ ಜಮೀನನ್ನು ವಾಪಸ್ ಕೊಡಿ, ಅವರು ಕೊಟ್ಟಿರುವ ಹಣವನ್ನು ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾರೆ.
Advertisement
ಗುಜರಾತ್‌ನ ರಾಜ್ ಕೋಟ್ ನಿವಾಸಿ ಕಮಲೇಶ್ ಅವರು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಜಮೀನು ಖರೀದಿ ಮಾಡಿ ಸುಮಾರು 8 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಕಾರಣಾಂತರದಿAದ ಶಾಸಕ ಪುಟ್ಟರಂಗಶೆಟ್ಟಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿದ್ದರು. ಶಾಸಕ ಹಾಗೂ ಶಾಸಕರ ಅಳಿಯ ರಾಮಚಂದ್ರ ಅವರು ಕಮಲೇಶ್ ಜೊತೆ 14 ಕೋಟಿ ರೂ.ಗೆ ಮಾತುಕತೆ ನಡೆಸಿದ್ದಾರೆ.
Advertisement
Advertisement
ಒಂದು ಕೋಟಿ ರೂ. ಹಣವನ್ನು ಮುಂಗಡವಾಗಿ ಶಾಸಕರ ಖಾತೆಯಿಂದ ಕಮಲೇಶ್ ಖಾತೆಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ 2.5 ಕೋಟಿಯನ್ನು ಕೆಲ ತಿಂಗಳ ಬಳಿಕ ಶಾಸಕರು ನೀಡಿದ್ದಾರೆ. ಈ ನಡುವೆ ಗಲಾಟೆಯಿಂದ ಜಮೀನಿನ ಯಾವುದೇ ರಿಜಿಸ್ಟರ್ ಆಗಿಲ್ಲ. ಆದರೆ ಶಾಸಕ ಪುಟ್ಟರಂಗಶೆಟ್ಟಿ ಅಳಿಯ ರಾಮಚಂದ್ರ ಹಾಗೂ ಬೆಂಬಲಿಗ ಶಾಂತ ಕುಮಾರ್ ಕೊಲೆ ಬೆದರಿಕೆ ಹಾಕಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಕಮಲೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ವೋಟರ್ ಡೇಟಾ ಹಗರಣ ಆರೋಪ- ಸರ್ಕಾರಕ್ಕೆ ಸಿದ್ದರಾಮಯ್ಯ ವಾರ್ನಿಂಗ್
Advertisement
ಸದ್ಯ 1,200 ಕ್ಯುಬಿಕ್ ಮೀಟರ್ ಕರಿ ಕಲ್ಲನ್ನು ತೆಗೆದಿದ್ದಾರೆ ಎಂದು ಆರೋಪ ಮಾಡಿರುವ ಕಮಲೇಶ್, ಜಮೀನು ವಿಚಾರದಲ್ಲಿ ನಡೆದ ಡೀಲ್‌ನಲ್ಲಿ ಕೊಟ್ಟ ಹಣವನ್ನು ವಾಪಸ್ ಶಾಸಕರಿಗೆ ಕೊಡುತ್ತೇನೆ. ನನ್ನ ಕರಿಕಲ್ಲನ್ನು ವಾಪಸ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಶಾಸಕರ ವಿರುದ್ಧ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಸ್ಪೀಕರ್ ಅನುಮತಿ ಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ. ಸದ್ಯ ಶಾಸಕರ ಅಳಿಯ ರಾಮಚಂದ್ರ ಹಾಗೂ ಶಾಂತ ಕುಮಾರ್ ವಿರುದ್ಧ ಅಷ್ಟೇ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ