ಚಾಮರಾಜನಗರ: ಲಾಕ್ ಡೌನ್ ನಿಂದಾಗಿ ಊಟ, ತಿಂಡಿ ಇಲ್ಲದೆ ಚಾಮರಾಜನಗರದಲ್ಲಿ ವಲಸೆ ಕಾರ್ಮಿಕರು ಪರದಾಡುತ್ತಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಚೆಕ್ ಪೋಸ್ಟ್ ಆದ ಚಾಮರಾಜನಗರ ತಾಲೂಕಿನ ಬಾಗಳಿ ಚೆಕ್ ಪೋಸ್ಟ್ ಬಳಿ ತಮಿಳುನಾಡಿನ ರಾಮೇಶ್ವರ ಮೂಲದ ಕಾರ್ಮಿಕರು ಅನ್ನ, ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ.
ಉಡುಪಿಯಿಂದ ಬಂದಿರುವ ಸುಮಾರು 100 ಕಾರ್ಮಿಕರು ಕಳೆದ ರಾತ್ರಿಯಿಂದ ಚೆಕ್ ಪೋಸ್ಟ್ ನಲ್ಲಿಯೇ ಉಳಿದಿದ್ದಾರೆ. ನಾಲ್ಕು ಕೆಎಸ್‍ಆರ್‍ಟಿಸಿಬಸ್ ನಲ್ಲಿ ಬಂದಿರುವ ಇವರನ್ನು ತಮಿಳುನಾಡು ಸರ್ಕಾರ ಸ್ವೀಕರಿಸಲು ಸಿದ್ಧವಿಲ್ಲದಿರುವುದರಿಂದ ಪಡಬಾರದ ಕಷ್ಟ ಪಡುತ್ತಿದ್ದಾರೆ.
ಇತ್ತ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೂಡ ಮೈಸೂರಿನಿಂದ ಬಂದ ಕಾರ್ಮಿಕರನ್ನು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿರುವುದರಿಂದ ಕಾರ್ಮಿಕರು ವೇದನೆ ಅನುಭವಿಸುತ್ತಿದ್ದಾರೆ.