ಚಾಮರಾಜನಗರ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಸಚಿವ ಸುರೇಶ್ ಕುಮಾರ್ ಬೆಟ್ಟದಲ್ಲಿನ ದಾಸೋಹ ಕೊಠಡಿಗೆ ತೆರಳಿದಾಗಿನ ಪ್ರಸಂಗವೊಂದನ್ನು ‘ನನ್ನ ಮನ ಮುಟ್ಟಿದ ಸನ್ನಿವೇಶ’ ಎಂದು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಸಚಿವರು ಬರೆದಿದ್ದೇನು?:
ಇಂದು ನನ್ನ ಮನ ಮುಟ್ಟಿದ ಸನ್ನಿವೇಶ. ಬೆಳಗ್ಗೆಯಿಂದ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಅಭಿವೃದ್ಧಿ ಪರಿಶೀಲನೆ ನಡೆಸುವಾಗ ದೇವಾಲಯದ ದಾಸೋಹ ಭವನಕ್ಕೆ ಹೋದೆ. ಹಾಗೇ ಅಡುಗೆ ಮನೆಗೆ ಪ್ರವೇಶಿಸಿದಾಗ ಬಿಸಿಬಿಸಿ ಸಾಂಬಾರ್ ತಯಾರಿಸುತ್ತಿದ್ದ ಈ ಪುಣ್ಯಾತ್ಮ ಸಿಕ್ಕರು.
Advertisement
Advertisement
ಇವರ ಹೆಸರು ಬಸವಣ್ಣ. ಕಳೆದ 32 ವರ್ಷಗಳಿಂದ ದಾಸೋಹದ ಅಡುಗೆ ಮನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಖುಷಿಯಿಂದ ಬಸವಣ್ಣನವರ ಬೆನ್ನು ತಟ್ಟಿ ಅವರ ಸೇವೆಯನ್ನು ಕೊಂಡಾಡಿದಾಗ ಅವರು ಯಾವುದೇ ಹಮ್ಮು-ಬಿಮ್ಮು ತೋರದೆ ಹೇಳಿದ್ದು “ಆ ಮಾದಪ್ಪ ನನಗೆ ಕೊಟ್ಟಿರುವ ಅವಕಾಶ ಇದು” ಎಂದು. ಅವರ ವಿನಮ್ರತೆಗೆ ನಾನು ಶರಣು ಶರಣೆಂದೆ ಎಂದು ಸಚಿವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
ಸದ್ಯ ಸಚಿವರ ಪೋಸ್ಟ್ ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.