ಚಾಮರಾಜನಗರ: ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಪತ್ರ ಬರೆದಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿಗೆ (Chamarajanagara DC) ಪತ್ರ ಬರೆದಿದ್ದಾರೆ. ಕಳೆದ ಮಾರ್ಚ್ 20 ರಂದೇ ಪತ್ರ ಬರೆದಿದ್ದು, ಇವರು ಚಾಮರಾಜನಗರ ತಾಲೂಕಿನ ವಿವಿಧೆಡೆ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 2 ರೂ. ಏರಿಕೆ – ಗ್ರಾಹಕರಿಗೆ ಯಾವುದೇ ಹೊರೆ ಇಲ್ಲ
ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ, ಹರದನಹಳ್ಳಿ, ಉಮ್ಮತ್ತೂರು ಬೂದಿತಿಟ್ಟು, ಕರಡಿ ಹಳ್ಳ, ಚಾಮರಾಜನಗರ, ಕನ್ನಿಕೆರೆ ಬಸವಾಪುರದ ಸರ್ವೆ ನಂಬರ್ ಗಳಲ್ಲಿರುವ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರು ಹಾಗು ಭಾರತ ಸರ್ಕಾರದ ನಡುವೆ 1,950 ರಲ್ಲಿ ಆಗಿರುವ ಒಪ್ಪಂದದ ಪ್ರಕಾರ ಇದೆಲ್ಲಾ ಮೈಸೂರು ಮಹಾರಾಜರ ಖಾಸಗಿ ಸ್ವತ್ತಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 10 ತಿಂಗಳ ಬಳಿಕ ಹಾಸನಕ್ಕೆ ಎಂಟ್ರಿ – ಭವಾನಿ ರೇವಣ್ಣಗೆ ಹೂಮಳೆ, ಆರತಿ ಬೆಳಗಿ ಸ್ವಾಗತ
ಖಾತೆ ಆಗುವ ತನಕ ದುರಸ್ತಿ, ಬೇರೆಯವರಿಗೆ ಖಾತೆ ಹಾಗೂ ಯಾವುದೇ ರೀತಿಯ ವಹಿವಾಟು ನಡೆಸದಂತೆ ತಕರಾರು ಅರ್ಜಿ ಜೊತೆಗೆ ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪ್ರಮೋದಾದೇವಿ ಮನವಿ ಮಾಡಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: Breaking | ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ