– ಮಗುವನ್ನು ನೋಡಲಾಗದೆ ಕಣ್ಣೀರಿಟ್ಟಿದ್ದ ವೈದ್ಯ
ಚಾಮರಾಜನಗರ: ಒಂದೆಡೆ ತಂದೆಯಾದ ಸಂಭ್ರಮ ಇನ್ನೊಂದೆಡೆ ಕರ್ತವ್ಯ ನಿಷ್ಠೆ. ಯಾವುದೇ ವ್ಯಕ್ತಿ ತಂದೆಯಾದಾಗ ಅದೊಂದು ಅವಿಸ್ಮರಣೀಯ ಕ್ಷಣ. ಆ ಕ್ಷಣದಲ್ಲಿ ಪತ್ನಿಯ ಜೊತೆಗಿರಬೇಕು. ತನ್ನ ಮಗುವನ್ನು ನೋಡಬೇಕು ಎಂದು ಆಸೆ, ಆಕಾಂಕ್ಷೆ ಸಹಜ.
ಆದರೆ ಚಾಮರಾಜನಗರ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ವಾರಿಯಾರ್ ಆಗಿ ಸೇವೆ ಮಾಡುತ್ತಿರುವ ವೈದ್ಯರೊಬ್ಬರು ಮಗು ಜನಿಸಿದರೂ ನೋಡಲು ಹೋಗದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಯದುಕುಲ್ ಅವರ ಪತ್ನಿಗೆ ಕಳೆದ ಏಪ್ರಿಲ್ 15 ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.
Advertisement
Advertisement
ಮಗು ಜನಿಸಿ 17 ದಿನ ಕಳೆದರೂ ನೋಡಲು ಹೋಗದೆ ಡಾ. ಯದುಕುಲ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಬೇಕು. ಮಗುವನ್ನು ಹೇಗೆಲ್ಲಾ ನೋಡಕೊಳ್ಳಬೇಕು ಎಂದು ಕನಸು ಕಂಡಿದ್ದ ಡಾ.ಯದುಕುಲ್‍ಗೆ ಅದು ಸಾಧ್ಯವಾಗಲೇ ಇಲ್ಲ. ಮಗುವಾದಾಗ ಒಂದು ಕಡೆ ಸಂತಸವಾದರೂ ಅದನ್ನು ಆ ಕ್ಷಣದಲ್ಲಿ ನೋಡಲಾಗದೆ ಈ ವೈದ್ಯ ಅತ್ತಿದ್ದರಂತೆ. ಬಿಡುವಾದಾಗ ವಿಡಿಯೋ ಕಾಲ್ ಮೂಲಕವೇ ಮಗು ನೋಡಿ ಬೇಸರ ಮರೆಯುತ್ತಿದ್ದಾರೆ.