ರಕ್ತದಾನ ಶಿಬಿರ- 70ಕ್ಕೂ ಹೆಚ್ಚು ಯುವತಿಯರು ಭಾಗಿ

Public TV
1 Min Read
CNG 4

ಚಾಮರಾಜನಗರ: ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ರೋಟರಿ ಸಂಸ್ಥೆ ಸಂಯುಕ್ತವಾಗಿ ನಗರದ ರೋಟರಿ ಭವನದಲ್ಲಿ ಮಹಿಳಾ ಸ್ವಯಂ ಸೇವಕರಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಾಮರಾಜನಗರದ ರೋಟರಿ ಭವನದಲ್ಲಿ ರಕ್ತದಾನ ಶಿಬಿರ 70ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, ಚಾಮರಾಜನಗರದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಿದೆ ಎಂದು ತಿಳಿದಿದ್ದರಿಂದ ಮತ್ತು ಯುವತಿಯರು ಕೂಡ ರಕ್ತದಾನ ಮಾಡಲು ಮುಂದಾಗಬೇಕೆಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

CNG 1 2

ಸೋದರಿ ನಿವೇದಿತಾ ಪ್ರತಿಷ್ಠಾನದ ರಾಜ್ಯ ಸಂಚಾಲಕಿ ಶ್ವೇತಾ ಮಾತನಾಡಿ, ಪ್ರತಿಷ್ಠಾನಕ್ಕೆ 5 ವರ್ಷವಾಗುತ್ತಿರುವುದರಿಂದ 5 ಆಯಾಮಗಳಲ್ಲಿ ಚಟುವಟಿಕೆ ಕೈಗೊಂಡಿದ್ದು, ಇದರಲ್ಲಿ ಯುವತಿಯರಿಂದ ರಕ್ತದಾನವೂ ಒಂದಾಗಿದೆ. ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಕೊಪ್ಪಳದಿಂದಲೂ ಸ್ವಯಂ ಸೇವಕರು ಆಗಮಿಸಿದ್ದು, ರಕ್ತದಾನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

Share This Article