ಚಾಮರಾಜನಗರ: ಹನೂರು (Hanur) ಪಟ್ಟಣದ ಗ್ರಾಮ ದೇವತೆ ಬೆಟ್ಟಳ್ಳಿ ಮಾರಮ್ಮ (Bettalli Maramma Temple) ಜಾತ್ರಾ ಮಹೋತ್ಸವದ ಹಿನ್ನೆಲೆ ಬುಧವಾರದಂದು 3,000ಕ್ಕೂ ಹೆಚ್ಚು ಭಕ್ತಾದಿಗಳು ಸಣ್ಣ ಬಾಯಿ ಬೀಗ ಹಾಕಿಕೊಂಡು ಮಾರಮ್ಮನಿಗೆ ಹರಕೆ ತೀರಿಸಿದರು. ಜೊತೆಗೆ, 103 ಮಂದಿ 18-20 ಅಡಿ ಉದ್ದದ ಸರಳಗಳ ಬಾಯಿ ಬೀಗ ಧರಿಸಿ ಮಾರಮ್ಮನಿಗೆ ನಮಿಸಿದರು.
ದೊಡ್ಡ ಬಾಯಿಬೀಗ ಹಾಕಿಕೊಂಡ ಭಕ್ತರು ಕಳೆದ ಒಂದು ವಾರದಿಂದ ಮಾರಮ್ಮನ ದೇವಾಲಯದಲ್ಲಿ ಸೇವೆ ಸಲ್ಲಿಸಿ ಬೆಳಗ್ಗೆ ತಣ್ಣೀರು ಸ್ನಾನ ಮಾಡಿ, ಉಪವಾಸವಿದ್ದ 103 ಮಂದಿ ಭಕ್ತಾದಿಗಳು 18ರಿಂದ 20 ಅಡಿ ಸರಳನ್ನು ಬಾಯಿಗೆ ಚುಚ್ಚಿಕೊಂಡು ಭಕ್ತಿ ಪರಾಕಾಷ್ಟೆ ಮೆರೆದರು. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್ ಮತ್ತೆ ಹೊಸ ಬಾಂಬ್
ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆ ಬುಧವಾರದಂದು 78 ಮಂದಿ ಪುರುಷರು 25 ಮಹಿಳೆಯರು ದೊಡ್ಡ ಬಾಯಿ ಬೀಗ ಹಾಕಿಕೊಂಡಿದ್ದು ನೋಡುಗರ ಎದೆ ಝಲ್ಲೆನಿಸುವಂತಿತ್ತು. ಇದನ್ನೂ ಓದಿ: ಡಿಕಾಕ್ ಅಬ್ಬರಕ್ಕೆ ರಾಯಲ್ಸ್ ಪಂಚರ್ – ಕೋಲ್ಕತ್ತಾಗೆ 8 ವಿಕೆಟ್‌ಗಳ ಜಯ
ಆಂಜನೇಯ ಸ್ವಾಮಿ ದೇವಾಲಯದಿಂದ ಕಿಲೋಮೀಟರ್ ಗಟ್ಟಲೆ ಮೆರವಣಿಗೆ ನಡೆಸಿ ಮಾರಮ್ಮನಿಗೆ ಭಕ್ತಿ ಸಮರ್ಪಿಸಿ ತಮ್ಮ ಸೇವೆಯನ್ನು ಸಂಪನ್ನಗೊಳಿಸಿದರು. ಇದನ್ನೂ ಓದಿ: ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬನ್ನಿ: ಜಯಮೃತ್ಯುಂಜಯ ಸ್ವಾಮೀಜಿ