– ಸಿಎಂ ಮನೆಯಲ್ಲಿ ರಾತ್ರಿ ನಡೆದಿತ್ತು ಡಿನ್ನರ್ ಮೀಟಿಂಗ್
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Elections 2024) ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಚುರುಕಾಗಿದೆ. ಚುನಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮನೆಯಲ್ಲಿ ಸಚಿವರು ಜೊತೆ ಡಿನ್ನರ್ ಮೀಟಿಂಗ್ ನಡೆದಿದೆ. ಈ ಬಗ್ಗೆ ಸಚಿವ ಚಲುವರಾಯಸ್ವಾಮಿ (Chaluvaraya Swamy) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಚುನಾವಣೆ ವಿಚಾರವಾಗಿ ಪಕ್ಷದ ತಂತ್ರಗಳ ಬಗ್ಗೆ ಮಾತನಾಡಲು ಕರೆದಿದ್ದರು ಎಂದಿದ್ದಾರೆ.
Advertisement
ಪಕ್ಷ ಏನು ಹೇಳುತ್ತೊ ಅದನ್ನು ಉಸ್ತುವಾರಿ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. 28 ಕ್ಷೇತ್ರಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ತೀವಿ. ಬಿಜೆಪಿ ರೀತಿ ನಾವು 28ಕ್ಕೆ 28 ಗೆಲ್ಲುತ್ತೀವಿ ಎಂದು ಹೇಳುವುದಿಲ್ಲ. 20 ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕೆಂಬ ಗುರಿ ಇದೆ. 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಮಾಡಿದ್ರೆ, ಜೋರಾಗಿ ಮಾತಾಡಿದ್ರೆ ಬೀಳುತ್ತೆ ಕೇಸ್
Advertisement
Advertisement
ಚುನಾವಣೆಗೆ ಸಚಿವರ ಸ್ಪರ್ಧೆ ವಿಚಾರ ಚರ್ಚೆಯಾಗಿಲ್ಲ. ರಾಜ್ಯದ ನಾಯಕರು ಹಾಗೂ ಹೈಕಮಾಂಡ್ ಏನು ಹೇಳುತ್ತೊ ಹಾಗೆ ಕೆಲಸ ಮಾಡುತ್ತೇವೆ. ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಒಪ್ಪಿಕೊಂಡಿದ್ದೇವೆ. ಇನ್ನೂ ನಿಗಮಮಂಡಳಿ ವಿಚಾರವಾಗಿ ಯಾವುದೇ ಅಸಮಾಧಾನ ಇಲ್ಲ. ಚುನಾವಣೆ ಕಡೆಗಷ್ಟೇ ನಮ್ಮ ಗಮನ ಇದೆ. ಈ ಬಗ್ಗೆ ಸ್ಥಳೀಯವಾಗಿ ಏನು ಮಾಡಬೇಕು ಎಂದು ಚರ್ಚಿಸುತ್ತೇವೆ. ಅನುಷ್ಠಾನ ಸಮಿತಿ ಬಗ್ಗೆ 4 ಸಾವಿರ ಜನ ನಾಮಿನೇಷನ್ ಮಾಡ್ತಿದ್ದೇವೆ. ಕಾರ್ಯಕರ್ತರಿಗೆ ಏನು ಸ್ಥಾನಮಾನ ಕೊಡ್ಬೇಕು ಅದನ್ನು ನಾವು ಕೊಡುತ್ತೇವೆ ಎಂದಿದ್ದಾರೆ.
Advertisement
ಮಂಡ್ಯದ ಕೆರಗೋಡು ವಿಚಾರವಾಗಿ, ಬಿಜೆಪಿ ಚುನಾವಣೆಗೋಸ್ಕರ ಅಲ್ಲಿ ಭಕ್ತಿ ತೋರಿಸುತ್ತಿದೆ. ನಾವು ಶಾಶ್ವತವಾಗಿ ಭಕ್ತಿ ತೋರಿಸುತ್ತೇವೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಇದೆಲ್ಲ ನಡೆಯಲ್ಲ. ಮಂಡ್ಯದ ಅಭಿವೃದ್ಧಿಗಷ್ಟೇ ನಾವು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಸಂಸದೆ ಸುಮಲತಾ ಅವರು, ಕಾಂಗ್ರೆಸ್ ಸೇರ್ಪಡೆ ಆಗ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಬಿಜೆಪಿ ಟಿಕೆಟ್ ಕೇಳೋಕೆ ಹೋಗ್ತೀವಿ ಎಂದು ಹೇಳಿದ್ದರು. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅವರ ಬಗ್ಗೆ ಗೌರವ ಇದೆ ಎಂದಿದ್ದಾರೆ. ಇದನ್ನೂ ಓದಿ: ಮಕ್ಕಳು ಬೈಕ್ ಓಡಿಸಿದ್ದಕ್ಕೆ ಪೋಷಕರಿಗೆ ಬಿತ್ತು ದಂಡ; 23 ಕಾಲೇಜುಗಳ 800 ವಾಹನಗಳಿಗೆ ಫೈನ್