ಬೆಂಗಳೂರು: ಪ್ರಾಣಿ ಪಕ್ಷಿಗಳನ್ನು ತುಂಬಾನೇ ಇಷ್ಟಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ದರ್ಶನ್ ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುತ್ತಾರೆ. ಹಾಗಾಗಿ ಅವರನ್ನು ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಮಾಡಿದ್ದು, ಇನ್ನು ಮುಂದೆ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಮಾಡಲಿದ್ದಾರೆ.
Advertisement
ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.
Advertisement
Advertisement
ದರ್ಶನ್ ಅವರ ಈ ಗುಣವನ್ನು ಗಮನಿಸಿದ ಅರಣ್ಯ ಇಲಾಖೆ ಗುಜರಾತ್‍ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ರಾಯಭಾರಿರಾಗಿ ನೇಮಕ ಮಾಡಿದಂತೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ಅವರನ್ನು ನೇಮಕ ಮಾಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರಿಗೆ ರಾಯಭಾರಿಯಾಗಿ ನೇಮಕಗೊಂಡಿರುವ ಪತ್ರವನ್ನು ನೀಡಿದ್ದಾರೆ.
Advertisement
ಇನ್ನೂ ಮುಂದೆ ದರ್ಶನ್ ವಿಶ್ವಭೂಮಿ ದಿನಾಚರಣೆ, ಪರಿಸರ ದಿನಾಚರಣೆ, ವನ ಮಹೋತ್ಸವ ಹಾಗೂ ಉಳಿದ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಸದ್ಯ ದರ್ಶನ್ ಮೈಸೂರು ಮೃಗಾಲಯದ ರಾಯಭಾರಿ ಆಗೋಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ದರ್ಶನ್ ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ 90 ನಿಮಿಷಗಳ ಸಾಕ್ಷ್ಯ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿದ್ದರಾಮಯ್ಯ!