ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಈಗಾಗಲೇ ಅನೇಕ ಬಿರುದುಗಳಿವೆ. ಅವರ ಸರಳ ವ್ಯಕ್ತಿತ್ವ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಅನೇಕ ಹೆಸರಿನಿಂದ ಅವರನ್ನು ಕರೆಯುತ್ತಿದ್ದು, ಈಗ ದರ್ಶನ್ ಮುಡಿಗೆ ಮತ್ತೊಂದು ಬಿರುದು ಸೇರಿದೆ.
ದರ್ಶನ್ ಅವರಿಗೆ ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ದಚ್ಚು ಹೀಗೆ ಅನೇಕ ಹೆಸರಿನಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇಷ್ಟು ಹೆಸರಿನ ಜೊತೆಗೆ ದರ್ಶನ್ ಅವರಿಗೆ ಈಗ ‘ಮೊನಾರ್ಕ್ ಆಫ್ ಸ್ಯಾಂಡಲ್ ವುಡ್’ ಬಿರುದು ದೊರೆತಿದೆ.
ಮೊನಾರ್ಕ್ ಆರ್ಫ ಸ್ಯಾಂಡಲ್‍ವುಡ್ ಎಂದರೆ ‘ಸ್ಯಾಂಡಲ್‍ವುಡ್ ರಾಜಪ್ರಭುತ್ವದ ಸಾರ್ವಭೌಮ’ ಎಂಬ ಅರ್ಥ ಎಂದು ಹೇಳಲಾಗಿದೆ. ದರ್ಶನ್ ಅವರ ‘ಡಿ ಲಿಗಸ್ಸಿ’ ಅಭಿಮಾನಿಗಳ ತಂಡ ಈ ಬಿರುದನ್ನು ನೀಡಿದೆ.
ಚಾಲೆಂಜಿಂಗ್ ಸ್ಟಾರ್ ಬಾಸ್ ಆಫ್ ಸ್ಯಾಂಡಲ್ ವುಡ್ ದರ್ಶನ್ ಅಣ್ಣ ನಿಗೆ D Legacy ತಂಡದಿಂದ Monarch Of Sandalwood ಎಂದು ಬಿರುದು ನೀಡಿ ಗೌರವಿಸಲಾಗಿದೆ
Monarch of sandalwood = ಸ್ಯಾಂಡಲ್ ವುಡ್ ರಾಜಪ್ರಭುತ್ವದ ಸಾರ್ವಭೌಮ@dasadarshan @Dcompany171 @dinakar219 @vijayaananth2 pic.twitter.com/djH6KuqeeA
— Thoogudeepa Dynasty ® (@Darshanfans171) July 1, 2018
ದರ್ಶನ್ ಸಾಕಷ್ಟು ಸಿನಿಮಾ ಸಾಧನೆ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ದರ್ಶನ್ ಅವರ ಈ ಕೆಲಸಗಳನ್ನು ಕಂಡು ಅಭಿಮಾನಿಗಳು ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್ ಎಂಬ ಹೊಸ ಬಿರುದು ನೀಡಿ ಅವರಿಗೆ ಸನ್ಮಾನ ಮಾಡಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಹಿಂದೆ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ. ನಾಗೇಂದ್ರ ಪ್ರಸಾದ್ ಅವರು `ಶತಸೋದರಾಗ್ರಜಾ ಶರವೀರ’ ಎಂದು ದರ್ಶನ್ ಅವರಿಗೆ ಹೊಸ ಬಿರುದನ್ನು ನೀಡಿದ್ದರು. ಅಲ್ಲದೇ ಹಿರಿಯ ನಟ ಶಂಕರ್ ಅಶ್ವಥ್ ದರ್ಶನ್ ಅವರಿಗೆ `ದೇವರಂಥ ಮನುಷ್ಯ’ ಎಂದು ಕರೆದು ಬಿರುದು ಕೊಟ್ಟಿದ್ದರು.