-ಶಿವನಹತ್ತಿರ ಮೆರೆಯುವ ನಂದಿಯ ಬ್ಯೂಟಿಫುಲ್ ಟ್ರ್ಯಾಕ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕನ್ನಡ ಬಹುನಿರೀಕ್ಷಿತ ಯಜಮಾನ ಸಿನಿಮಾದ ಮೊದಲ ಹಾಡು ಇಂದು 11 ಗಂಟೆಗೆ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ.
ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈಗ ತಾನೆ ಬಿಡುಗಡೆಯಾದ ಚಿತ್ರದ ಮೊದಲ ಹಾಡು `ಶಿವನಂದಿ’ ಸಾಂಗ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿರುವ ಶಿವನಂದಿ ಹಾಡು ದಿ ಬಾಸ್ ಅಭಿಮಾನಿಗಳ ಪಾಲಿಗೆ ಸಿಹಿ ಸಂಭ್ರಮ ತಂದಿದೆ. ಈ ಹಾಡನ್ನು ನೋಡಿದವರು ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ಒಳ್ಳೆ ಉಡುಗೊರೆ ನೀಡಿದ್ದಾರೆ ಅಂತ ಖುಷಿ ಪಡುತ್ತಿದ್ದಾರೆ.
Advertisement
Advertisement
ಹಾಡಿನಲ್ಲಿ ಚಿತ್ರದ ನಾಯಕನ ವರ್ಣನೆಯನ್ನು ಹೇಳಲಾಗಿದೆ. ಶಿವನಂದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದರ್ಶನ್ ಇಂಟ್ರುಡೆಕ್ಷನ್ ಹಾಡು ಇದಾಗಿದೆ. ಸಿನಿಮಾ ಟೈಟಲ್ ಗೆ ತಕ್ಕಂತೆ ಯಜಮಾನನ ಗುಣಗಳನ್ನು ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಲಿರಿಕಲ್ ವಿಡಿಯೋ ಬಿಡುಗಡೆಯಾದ ಕೇವಲ ಅರ್ಧ ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.
Advertisement
ಅಷ್ಟೇ ಅಲ್ಲದೆ ದಚ್ಚು ಅಭಿಮಾನಿಗಳು ತಮ್ಮ ನೆಚ್ಚಿನ ನಟ `ಯಜಮಾನ’ನಾಗಿ ಹೇಗೆ ಮಿಂಚಲಿದ್ದಾರೆ ಅಂತ ನೋಡಲು ಚಿತ್ರ ಬಿಡುಗಡೆಯಾಗೊದನ್ನೇ ಕಾಯುತ್ತಿದ್ದಾರೆ. ಸದ್ಯ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿರುವ ಶಿವನಂದಿ ಹಾಡಿಗೆ ದಚ್ಚು ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement
ಯಾಜಮಾನ ಚಿತ್ರದಲ್ಲಿ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದಾರೆ. ಹಾಗೆಯೇ ಅವರಿಗೆ ಜೋಡಿಯಾಗಿ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಮಿಡಿಯಾ ಹೌಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ನಿರ್ದೇಶಕ ಪೊನ್ನುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ದರ್ಶನ್ ಅವರ 51 ನೇ ಚಿತ್ರ ಇದಾಗಿದ್ದು. ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv