Monday, 16th July 2018

ರಾಜ್ಯದೆಲ್ಲೆಡೆ ತಾರಕ್ ಫೀವರ್ – ಬೆಳ್ಳಂಬೆಳಗ್ಗೆಯೇ ಹಲವೆಡೆ ಪ್ರದರ್ಶನ

ಬೆಂಗಳೂರು: ನವರಾತ್ರಿ ಉತ್ಸವದ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಸಿನಿಮಾ ರಿಲೀಸ್ ಆಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತಾರಕ್ ತೆರೆ ಕಾಣ್ತಿದೆ.

ದರ್ಶನ್ ಅಭಿನಯದ ಸಿನಿಮಾ ಅಂದ್ರೆ ಥಿಯೇಟರ್‍ಗಳಲ್ಲಿ ಅಪಾರ ಬೇಡಿಕೆ ಇರುತ್ತೆ. ಹೀಗಾಗಿ ರಾಜ್ಯದ ಕೆಲವೆಡೆ ಎಕ್ಸ್‍ಟ್ರಾ ಶೋ ಏರ್ಪಡಿಸಲಾಗಿದೆ. ಬೆಂಗಳೂರಿನ ಉತ್ತರಹಳ್ಳಿಯ ವೈಭವಿ ಚಿತ್ರಮಂದಿರದಲ್ಲಿ 6.30ಕ್ಕೆ ವಿಶೇಷ ಶೋ ಶುರುವಾಗಿದೆ. ಬೆಳ್ಳಂಬೆಳಗ್ಗೆ ಮಹಿಳೆಯರು ಕೂಡ ದರ್ಶನ್ ಸಿನಿಮಾ ನೊಡಲು ಮುಗಿಬಿದ್ದಿದ್ದಾರೆ.

`ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಬಾಲಿವುಡ್ ಸಿಂಗರ್ ಅರಮಾನ್ ಮಲ್ಲಿಕ್ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗಾಯಕ ವ್ಯಾಸ್, ವಿಜಯ್ ಪ್ರಕಾಶ್ ಮತ್ತು ಗಾಯಕಿಯರಾದ ಶ್ರೇಯಾ ಘೋಷಾಲ್, ಇಂದು ನಾಗರಾಜ್, ನೀತಿ ಮೋಹನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.

Leave a Reply

Your email address will not be published. Required fields are marked *