ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಅಪ್ಪನಂತೆ ಚಿಕ್ಕ ವಯಸ್ಸಿನಿಂದಲೇ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಪ್ಪ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದರೆ, ಮಗ ತನ್ನ ಟ್ಯಾಲೆಂಟ್ ನಿಂದ ಎಲ್ಲರನ್ನು ಇಂಪ್ರೆಸ್ ಮಾಡುತ್ತಿದ್ದಾರೆ.
ಇತ್ತೀಚೆಗೆ ವಿನೀಶ್ ದರ್ಶನ್ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಅಪ್ಪ-ಅಮ್ಮ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದರು. ಈ ಮೂಲಕ ವಿನೀಶ್ ಕೇವಲ ಓದುವುದಷ್ಟೇ ಅಲ್ಲದೆ ಇತರೆ ಕೆಲಸಗಳಲ್ಲಿಯೂ ಸಖತ್ ಟ್ಯಾಲೆಂಟ್ ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿದ್ದರು.
Advertisement
Advertisement
ವೀನಿಶ್ ತಾಯಿ ಕೂಡ ಮಗನನ್ನು ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ವಿನೀಶ್ ದರ್ಶನ್ ಹಾಗೂ ವಿಜಯಲಕ್ಷ್ಮೀ ಗಣಪನ ಮಾಡುವುದನ್ನು ಕಲಿತಿದ್ದಾರೆ. ಇತ್ತೀಚಿಗಷ್ಟೇ ಅಮ್ಮನ ಜೊತೆ ಸೇರಿ ಮಣ್ಣಿನಲ್ಲಿ ಗಣೇಶನನ್ನು ಮಾಡುವುದನ್ನು ಕಲಿತುಕೊಂಡಿದ್ದಾರೆ. ತಾವು ಮಾಡಿದ ಗಣಪನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
Advertisement
ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವಿನೀಶ್ ಚಿನ್ನದ ಪದಕವನ್ನ ಗೆದ್ದು ತಂದಿದ್ದರು. ಈ ವಿಚಾರವನ್ನ ತಿಳಿದ ದರ್ಶನ್ ತುಂಬಾ ಸಂತಸ ಪಟ್ಟಿದ್ದರು. ವಿನೀಶ್ ದರ್ಶನ್ ರಾಜರಾಜೇಶ್ವರಿ ನಗರದ ಹಿಲ್ ವೀವ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
Advertisement
ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ಆಸೆಗಳಿಗೆ ಅಪ್ಪ-ಅಮ್ಮ ಇಬ್ಬರು ಸಾಥ್ ನೀಡುತ್ತಿದ್ದಾರೆ. ವಿನೀಶ್ ಆಸಕ್ತಿ ಇರೋ ವಿಚಾರದಲ್ಲಿ ತೊಡಗಿಕೊಳ್ಳಲು ದರ್ಶನ್ ಹಾಗೂ ವಿಜಯಲಕ್ಷ್ಮೀ ಅವಕಾಶ ಮಾಡಿಕೊಡುತ್ತಾರೆ. ಶಾಲೆಯ ರಜಾ ದಿನಗಳಲ್ಲಿ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆಯಲ್ಲಿ ಕಾಲಕಳೆಯುವುದರ ಜೊತೆಯಲ್ಲಿ ಕ್ಲೇ ಮೇಕಿಂಗ್, ಕೇಕ್ ಮೇಕಿಂಗ್ ಹೀಗೆ ಇನ್ನೂ ಅನೇಕ ಕಾರ್ಯಗಾರದಲ್ಲಿ ವಿನೀಶ್ ಭಾಗಿಯಾಗುತ್ತಾರೆ. ಇದನ್ನು ಓದಿ: ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ