Connect with us

Cinema

ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

Published

on

– ರಾತ್ರಿಯಿಂದಲೇ ಅಭಿಮಾನಿಗಳಿಗೆ ಸಡಗರ

ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಸಿನಿಮಾ ತೆರೆಗೆ ಅಪ್ಪಳಿಸಿದೆ. ಗುರುವಾರ ರಾತ್ರಿಯಿಂದಲೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿ 12 ಗಂಟೆ ಚಿತ್ರ ಪ್ರದರ್ಶನಗೊಂಡಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೆಹಲಿ ಮತ್ತು ಗುಜರಾತ್‍ನಲ್ಲಿ ತೆರೆ ಕಂಡಿದೆ. ದೇಶದ ಒಟ್ಟು 500 ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ಚಕ್ರವರ್ತಿ ದರ್ಶನ ನೀಡುತ್ತಿದ್ದಾರೆ.

ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನೆಮಾ ಮಧ್ಯರಾತ್ರಿಯೇ ಬಿಡುಗಡೆಗೊಂಡಿದೆ. ಮಧ್ಯ ರಾತ್ರಿ ಶೋ ನೋಡಲು 8 ಗಂಟೆಯಿಂದಲೇ ಟಿಕೇಟ್ ಗಾಗಿ ಕ್ಯೂನಿಂತಿದ್ದರು. ಕೆಲ ಮಿತಿಮೀರಿದ ವರ್ತನೆ ತೋರುತ್ತಿದ್ದ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಹಲವು ಬಾರಿ ಲಘು ಲಾಠಿ ಪ್ರಹಾರವನ್ನೂ ಮಾಡಲಾಯಿತು. ಚಿತ್ರಮಂದಿರದ ಆವರಣದ ತುಂಬಾ ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗುತ್ತಿದ್ದರು. ಸಿನೆಮಾ ಪ್ರದರ್ಶನ ಆರಂಭವಾದ ನಂತರ ದರ್ಶನ್ ಎಂಟ್ರಿ ವೇಳೆ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.

ತುಮಕೂರಿನಲ್ಲಿ ರಾತ್ರಿಯಿಂದಲೇ ಚಿತ್ರ ತೆರೆ ಕಂಡಿದೆ. ಗಾಯತ್ರಿ ಮತ್ತು ಮಾರುತಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು ಮಾರುತಿ ಚಿತ್ರ ಮಂದಿರದಲ್ಲಿ ರಾತ್ರಿ 12 ಗಂಟೆ ಮತ್ತು ಬೆಳಗಿನ ಜಾವ 4-30 ಕ್ಕೆ ವಿಶೇಷ ಪ್ರದರ್ಶನ ನಡೆಸಲಾಯಿತು. ಮಧ್ಯರಾತ್ರಿ 12 ರ ಶೋಗೂ ಅಭಿಮಾನಿಗಳು ಮುಗಿಬಿದ್ದು ಚಿತ್ರ ವೀಕ್ಷಿಸಿದರು. ಇನ್ನೂ ಕೆಲ ಅಭಿಮಾನಿಗಳು ತಮ್ಮ ಹೇರ್‍ಸ್ಟೈಲ್‍ನಲ್ಲಿಯೇ ಚಕ್ರವರ್ತಿ ಎಂಬ ಹೆಸರು ಮೂಡುವ ಹಾಗೆ ಹೇರ್‍ಕಟ್ ಮಾಡಿಸಿಕೊಂಡು ಗಮನ ಸೆಳೆದರು.

ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

ಇದನ್ನೂ ಓದಿ: ಯುಗಾದಿಗೆ ‘ಚಕ್ರವರ್ತಿ’ ಸಿನಿಮಾದ ಟ್ರೇಲರ್ ರಿಲೀಸ್

ಇದನ್ನೂ ಓದಿ: ನಾವ್ ಲಾಂಗ್ ಇರೋದ್ರಿಂದ ಲಾಂಗ್ ನಮ್ಗೆ ಮ್ಯಾಚಾಗುತ್ತೆ: ಫೇಸ್ ಬುಕ್ ಲೈವ್‍ನಲ್ಲಿ ನಟ ದರ್ಶನ್

Click to comment

Leave a Reply

Your email address will not be published. Required fields are marked *

www.publictv.in