ಡೆಹ್ರಾಡೂನ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೆ ಕಾಡಿನತ್ತ ಮುಖಮಾಡಿದ್ದಾರೆ. ಕಳೆದೆರಡು ತಿಂಗಳ ಹಿಂದಷ್ಟೇ ಕೀನ್ಯಾ ಕಾಡಿನಲ್ಲಿ ದಚ್ಚು ಆಂಡ್ ಟೀಂ ಸಫಾರಿ ಮಾಡಿದ್ದರು. ಅಲ್ಲಿನ ಮಕ್ಕಳೊಂದಿಗೆ ಕುಣಿದು ಖುಷಿಪಟ್ಟು, ಏರ್ ಬಲೂನ್‍ನಲ್ಲಿ ಆಗಸದಲ್ಲಿ ಹಾರಾಡುತ್ತಾ ಪ್ರಾಣಿಗಳ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈಗ ಡಿ ಬಾಸ್ ಉತ್ತರಾಖಂಡ್‍ನತ್ತ ಸಾಗಿದ್ದಾರೆ.
ಹೌದು, ವನ್ಯಜೀವಿ ಮತ್ತು ಪ್ರಾಣಿಪಕ್ಷಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಇತ್ತೀಚೆಗೆ ಉತ್ತರಾಖಂಡ್ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಛಾಯಾಗ್ರಹಣ ಮಾಡಿದ್ದಾರೆ. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‌ಲೈಫ್ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದಾರೆ. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಇದನ್ನೂ ಓದಿ: ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಸಿನಿಮಾ ಕೆಲಸದ ಜೊತೆಗೆ ವೈಲ್ಡ್‌ಲೈಫ್ ಫೋಟೋಗ್ರಾಫಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಬಂಡಿಪುರದ ಕಾಡಿನ ಕಡೆಗೆ ಸಾರಥಿ ಹೋಗುತ್ತಾರೆ. ಇದನ್ನೂ ಓದಿ: ಕೀನ್ಯಾದಿಂದ ಹಿಂತಿರುಗಿದ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು
Exclusive Video..
ಉತ್ತರಾಖಂಡ್ ನಲ್ಲಿ ಅರಣ್ಯ ಪ್ರದೇಶಗಳಿಗೆ ಸ್ನೇಹಿತರೊಂದಿಗೆ ಭೇಟಿ ನೀಡಿದ ಬಾಕ್ಸ್ ಆಫೀಸ್ ಸುಲ್ತಾನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವೀಡಿಯೊ????????????#ChallengingStarDarshan #DBoss@dasadarshan
@akdtasbelagavi @DBOSSFansDwd @CDbosss @ManuDacchu01 pic.twitter.com/cUHcNtlcCr
— ಮಿಥುನ್ ದಚ್ಚು ತೂಗುದೀಪ (@miithundacchu) January 28, 2020
ಅಷ್ಟೇ ಅಲ್ಲದೆ ಈ ಬಾರಿ ಕೂಡ ದರ್ಶನ್ ತೆಗೆದ ಫೋಟೋಗಳು ಪ್ರದರ್ಶನಗೊಳ್ಳಲಿದೆ. ಚಾಲೆಂಜಿಂಗ್ ಸ್ಟಾರ್ ನ ಕೈಚಳಕದಲ್ಲಿ ಮೂಡಿ ಬಂದ ಫೋಟೋ ಖರೀದಿಸಲು ಕಲಾವಿದರು ಸೇರಿದಂತೆ ಡಿ ಬಾಸ್ ಫ್ಯಾನ್ಸ್ ಕಾದು ಕುಳಿತಿದ್ದಾರೆ.