ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಐಪಿಎಲ್ ಕ್ರಿಕೆಟ್ ನೋಡಿಕೊಂಡು ಬೆಟ್ಟಿಂಗ್ ಕಟ್ಟಿ ಜೀವನವನ್ನು ಹಾಳು ಮಾಡುವ ಮಂದಿಯನ್ನು ಎಚ್ಚರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಗ ಐಪಿಎಲ್ ಶುರು ಆಗಿದೆ. ಇದೇ ಕಾನ್ಸೆಪ್ಟ್ ತಗೊಂಡು ಯುವಕರು ಐಪಿಎಲ್ ಗ್ಯಾಂಬ್ಲರ್ಸ್ ಹೆಸರಿನ ಕಿರುಚಿತ್ರವನ್ನು ಮಾಡಿದ್ದಾರೆ. ಐಪಿಎಲ್ ಶುರು ಆದಾಗ ಎಲ್ಲರೂ ಬೆಟ್ಟಿಂಗ್ ಕಟ್ಟುತ್ತಾರೆ. ಮ್ಯಾಚ್ ನೋಡುವ ಬದಲು ಬೆಟ್ಟಿಂಗ್ ಹೆಚ್ಚು ಕಟ್ಟುತ್ತಾರೆ. ಐಪಿಎಲ್ ಯನ್ನು ಮ್ಯಾಚ್ ತರಹ ನೋಡಿ ಎಂಜಾಯ್ ಮಾಡಿ ಎಂದು ದರ್ಶನ್ ತಿಳಿಸಿದ್ದಾರೆ.
ಐಪಿಎಲ್ ಆಟಗಾರರು ಕಷ್ಟಪಟ್ಟು ತಮ್ಮ ತಂಡಕ್ಕಾಗಿ ಆಡುತ್ತಾರೆ. ಪಂದ್ಯ ಗೆಲ್ಲೋದಕ್ಕೆ ಅವರದೇ ಒಂದು ಸ್ಟ್ರಾಟೆಜಿ ಇರುತ್ತದೆ. ಹಾಗಂತ ನೀವು ಬೆಟ್ಟಿಂಗ್ ಕಟ್ಟಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ವಿಚಾರಕ್ಕೆ ಸಂಬಂಧಪಟ್ಟಿದ್ದಂತೆ ಯುವಕರ ತಂಡವೊಂದು ಐಪಿಎಲ್ ಗ್ಯಾಂಬ್ಲರ್ಸ್ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಚಿತ್ರವನ್ನು ನೋಡಿ ಬೆಂಬಲಿಸಿ, ಆರ್ಶಿವಾದ ಮಾಡಿ ಎಂದು ದರ್ಶನ್ ವಿಡಿಯೋವೊಂದರಲ್ಲಿ ಹೇಳಿದ್ದಾರೆ.