ಉಡುಪಿ: ಇಲ್ಲಿನ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಭೇಟಿ ನೀಡಿದ್ರು.
ಉಡುಪಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನವನ್ನು ಮೂವತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಪ್ರಯುಕ್ತ ಪಡೆದ ಸಭಾ ಕಾರ್ಯಕ್ರಮದಲ್ಲಿ ದರ್ಶನ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ರು.
Advertisement
Advertisement
ಕೈ ಮುಗಿದು ವೇದಿಕೆ ಹತ್ತಿದ ದರ್ಶನ್, ನಾಡಿನ ಹಿರಿಯ ಯತಿ ಪೇಜಾವರ ಸ್ವಾಮೀಜಿಯ ಆಶೀರ್ವಾದ ಪಡೆದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಅಪೂರ್ವ ಶಿಲ್ಪಕಲಾ ಕೆತ್ತನೆಯನ್ನು ಬೆರಗುಗಣ್ಣಿನಿಂದ ನೋಡಿದರು. ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.
Advertisement
ದರ್ಶನ್ ಗೆ ಖ್ಯಾತ ನಟರಾದ ಸೃಜನ್ ಲೋಕೇಶ್, ಧನಂಜಯ್ ಮತ್ತಿತರರು ಸಾಥ್ ನೀಡಿದ್ರು. ದೇವರ ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರು ದರ್ಶನ್ ದರ್ಶನದಿಂದ ಪುಳಕಿತರಾಗಿದ್ರು. ಈ ವೇಳೆ ಮಾತನಾಡಿದ ದರ್ಶನ್, ಪೂರ್ವಿಕರು ನೀಡಿದ ಆಸ್ತಿಯಯನ್ನು ಉಳಿಸುವುದು, ಜೀರ್ಣೋದ್ಧಾರಗೊಳಿಸುವುದು ಪುಣ್ಯದ ಕೆಲಸ. ಈ ಕಾರ್ಯ ಮಾಡಿದ ಹಿರಿಯಡ್ಕ ಜನತೆಗೆ ಧನ್ಯವಾದ ಅಂತ ಹೇಳಿದ್ರು.
Advertisement
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಗೆಳೆಯರು ಇದು ಇಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಬೇಟಿ ನೀಡಿದರು@dasadarshan @srujanlokesh pic.twitter.com/vHEC9dUQzA
— D Company(R)Official (@Dcompany171) April 22, 2018
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಗೆಳೆಯರು ಇಂದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಬೇಟಿ ನೀಡಿದರು @dasadarshan @srujanlokesh pic.twitter.com/8Of1nTZSdA
— D Company(R)Official (@Dcompany171) April 22, 2018