ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶನಿವಾರ ತಮಿಳುನಾಡಿನ ತಿರುನಲ್ಲರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಮಗ ವಿನೀಶ್ ಮತ್ತು ಕೆಲವು ಸ್ನೇಹಿತರ ಜೊತೆ ಜನಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿದ ದರ್ಶನ್ ಭಕ್ತಿಯಿಂದ ಕಣ್ಮುಚ್ಚಿ ಕೈ ಮುಗಿದರು. ಕಡು ನೀಲಿ ವರ್ಣದ ಉಡುಪು ಧರಿಸಿ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್ ಹರಕೆ ತೀರಿಸಿದರು. ದೀಪದ ಎಣ್ಣೆಯ ತುಲಾಭಾರ ಹರಕೆ ಪೂರೈಸಿದರು.
Advertisement
ವರ್ಷಕ್ಕೊಮ್ಮೆ ಆದರೂ ದರ್ಶನ್ ತಿರುನಲ್ಲರ್ ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಕಾರು ಅಪಘಾತದಲ್ಲಿ ಬಲಗೈಗೆ ಗಾಯವಾಗಿದ್ದ ಕಾರಣ ಇದೀಗ ವಿಶ್ರಾಂತಿಯಲ್ಲಿರುವ ದರ್ಶನ್ ಕೈ ಗಾಯದ ನಡುವೆಯೂ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು.
Advertisement
Advertisement
ಇತ್ತೀಚೆಗೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ರಾಕ್‍ಲೈನ್ ವೆಂಕಟೇಶ್ ಅವರ ಜೊತೆ ಸೇರಿ ದರ್ಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ದರು.
Advertisement
ಮುರುಘಾಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರುತ್ತಿದ್ದಂತೆ ಮಠದ ಆನೆ ಬಗ್ಗೆ ವಿಚಾರಿಸಿದ್ದರು. ಅಲ್ಲದೇ ಆನೆಯ ಆರೋಗ್ಯದ ಬಗ್ಗೆಯೂ ವಿಚಾರಿಸಿ ತಿಂಡಿ ಏನು ಕೊಟ್ಟಿದ್ದೀರಿ ಎಂದು ಮಾವುತರಿಗೆ ಕೇಳಿದ್ದರು. ಅಷ್ಟೇ ಅಲ್ಲದೇ ಆನೆಯ ದಂತವನ್ನು ಕೈಯಿಂದ ಮುಟ್ಟಿ ನೋಡಿ ಚೆನ್ನಾಗಿದೆ ಹೇಳಿದರು.
ಎಂದಿನಂತೆ ಈ ವರ್ಷವೂ ಸಹ ತಿರುನಲ್ಲರ್ ಶನೇಶ್ವರ ಪುಣ್ಯಕ್ಷೇತ್ರಕ್ಕೆ ನಮ್ಮೆಲ್ಲರ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಭೇಟಿ ನೀಡಿ ದೈವಕೃಪೆಗೆ ಪಾತ್ರರಾದರು. @dasadarshan @vijayaananth2 @dinakar219 pic.twitter.com/i8T1N4UU3Y
— D Company(R)Official (@Dcompany171) October 20, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv