ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ರೇಕ್ ತೆಗೆದುಕೊಂಡು ಈಗ ಮತ್ತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅವರು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿದ್ದು ಪ್ರಧಾನಿ ಬೆಂಬಲ ಘೋಷಿಸಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಅಂಬರೀಶ್ ಮಾಡಿರುವ ಕಾರ್ಯವನ್ನು ಇನ್ನೊಬ್ಬರು ಹೇಳಿದ್ದಾರೆ ಎಂದರೆ ಅದು ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ಸುಮ್ಮನೆ ಅದು ಇದು ಎಂದು ಹೇಳಿದರೆ, ತಪ್ಪಾಗುತ್ತದೆ. ಅಂಬರೀಶ್ ಅವರು ಸಹಾಯನ್ನು ತಲೆ ತಗ್ಗಿಸಿ ಮಾಡಿದರು, ದುಡಿಮೆಯನ್ನು ತಲೆ ಎತ್ತಿ ಮಾಡಿದರು. ಅಂಬರೀಶ್ ಅವರು ಈ ಕೆಲಸಗಳನ್ನು ಅವರು ಮಾಡಿದರು, ಇವರು ಮಾಡಿದ್ದಾರೆ ಎಂದು ಹೇಳಿದರೆ ಹೊರತು ಸಹ ತಾವು ಮಾಡಿದ ಸಹಾಯವನ್ನು ಹೇಳಿಕೊಳ್ಳುವ ವ್ಯಕ್ತಿಯಲ್ಲ ಎಂದರು.
Advertisement
Advertisement
ಅಂಬರೀಷ್ ಆರೋಗ್ಯ, ರಾಜಕೀಯ ಬದುಕು ಹಾಳಾಗಿದ್ದು ಸುಮಲತಾರಿಂದ ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಒಂದು ಸಲ ರವೀಂದ್ರ ಅವರು ನೆನಪಿಸಿಕೊಳ್ಳಲಿ. ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದಾಗ ಸುಮಮ್ಮ ಅವರು ಸಿಂಗಾಪುರಕ್ಕೆ ಕರೆದುಕೊಂಡು ಹೋಗಿದ್ದರು. ಸಿಂಗಾಪುರ ಹೋಗುವ ವೇಳೆ ಸುಮಮ್ಮ ನಾನು ಖಂಡಿತಾ ಅಂಬರೀಶ್‍ರನ್ನು ಮತ್ತೆ ವಾಪಸ್ ಕರೆದುಕೊಂಡು ಬರುತ್ತೀನಿ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಅದೊಂದೇ ಸಾಕು ಸುಮಮ್ಮ ಎಂಥವರು ಎಂದು ಹೇಳುವುದಕ್ಕೆ. ವೈಯಕ್ತಿಕ ಟೀಕೆ ಮಾಡಬಾರದು, ಟೀಕೆ ಮಾಡೋರು ಅರ್ಥ ಮಾಡ್ಕೋಬೇಕು ಎಂದು ಜೆಡಿಎಸ್ ನಾಯಕರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ.
Advertisement
ಕೆ ಆರ್ ನಗರದ ಹೊಸೂರಿಗೆ ದರ್ಶನ್ ಆಗಮಿಸಿದ ದರ್ಶನ್ ಅವರಿಗೆ ಅಭಿಮಾನಿಗಳು ಹೂ ಸುರಿದು, ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ವೇಳೆ ದರ್ಶನ್ ಸುಮಲತಾ ಅವರನ್ನು ಗೆಲ್ಲಿಸಿ. ಸುಮಲತಾ ಅವರ ಕ್ರಮ ಸಂಖ್ಯೆ 20. ತುಂಬಾ ಗೊಂದಲ ಇದೆ. ಕ್ರಮ ಸಂಖ್ಯೆ 20 ಎನ್ನುವುದನ್ನು ಒತ್ತಿ ಒತ್ತಿ ಹೇಳಿ ಜನರಲ್ಲಿ ಮನವಿ ಮಾಡಿದರು.