ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದೆ. ದೋಸ್ತಾ ಮೂಲಕ ಹುಚ್ಚೆಬಿಸಿದ್ದ ಚಿತ್ರ ತಂಡ, ಇದೀಗ ರಾಮನನ್ನು ಜಪಿಸುವಂತೆ ಮಾಡಿದೆ.
Advertisement
ಈ ಮೂಲಕ ರಾಮನವಮಿಗೆ ರಾಬರ್ಟ್ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದ್ದು, ಜೈ ಶ್ರೀರಾಮ ಹಾಡಿನ ಮುಂದುವರಿದ ಭಾಗವನ್ನು ಮೇಕಿಂಗ್ ವಿಡಿಯೋ ಸಮೇತ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ 10.5ಕ್ಕೆ ಹಾಡು ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಈ ಹಿಂದೆ ದೋಸ್ತಾ ಹಾಡಿನ ಮೂಲಕ ಸ್ನೇಹಿತನ ಮಹತ್ವವನ್ನು ಸಾರಿದ್ದ ರಾಬರ್ಟ್ ಚಿತ್ರತಂಡ ಇದೀಗ ಜೈ ಶ್ರೀರಾಮ ಮೂಲಕ ರಾಮನ ಘಾತೆಯನ್ನು ಪರಿಚಯಿಸಿದೆ.
Advertisement
Advertisement
ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇದಸೇ……ರಘುನಾಥಾಯ……ಸೀತಾಯ ಪತಯೇ ನಮಃ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂದು ಮತ್ತೆ ಮುಂದುವರಿಯುತ್ತದೆ.
Advertisement
ಹಾಡಿಗೆ ಮೇಕಿಂಗ್ ವಿಡಿಯೋ ಸೇರಿಸಿದ್ದು, ಡಿ ಬಾಸ್ ಸ್ಟೆಪ್ಸ್ ಸಹ ಕೇಂದ್ರೀಕರಿಸಲಾಗಿದೆ. ಅಲ್ಲದೆ ಅರ್ಜುನ್ ಜನ್ಯಾ ಪಿಯಾನೋ ನುಡಿಸುವ ದೃಶ್ಯ ಇದೆ. ಅಲ್ಲಲ್ಲಿ ಆರ್ಕೆಸ್ಟ್ರಾ ಬರುತ್ತದೆ. ಶಂಕರ್ ಮಹದೇವನ್ ಹಾಡುವ ಶೈಲಿಯನ್ನು ತೋರಿಸಲಾಗಿದೆ. ಶಂಕರ್ ಮಹದೇವನ್ ಏರು ಧ್ವನಿಯಲ್ಲಿ ಹಾಡುತ್ತಿದ್ದರೆ, ದೇಹದಲ್ಲಿ ಒಂದು ರೀತಿಯ ಸಂಚಲನವೇ ಸೃಷ್ಟಿಯಾಗುತ್ತದೆ. ಬೀಟ್ಸ್ ಸೌಂಡ್, ರಿಧಂ ಪ್ಯಾಡ್ ಹೊಂದಾಣಿಕೆ ಜುಗಲ್ಬಂಧಿಯಂತಿದೆ.