ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಶೂಟಿಂಗ್‍ಗಾಗಿ ವರ್ಷಕ್ಕೆ ನಾಲ್ಕು ಬಾರಿಯಾದರೂ ವಿದೇಶಕ್ಕೆ ಹೋಗೋದು ಸಾಮಾನ್ಯ. ಈ ಹಿಂದೆ ಕೂಡ ಎಷ್ಟೋ ಬಾರಿ ಲಂಡನ್‍ಗೆ ದಾಸ ಭೇಟಿ ನೀಡಿದ್ದರು. ಆದರೆ ಈ ಬಾರಿ ಲಂಡನ್ ನಲ್ಲಿ ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್ ಪಡೆದುಕೊಂಡು ಹಾಗೇ ಟ್ರಿಪ್ ಮುಗಿಸಿಕೊಂಡು ಮರಳಿದ್ದಾರೆ.
Advertisement
ದರ್ಶನ್ ಅವರ ಈ ಬಾರಿಯ ಲಂಡನ್ ಪ್ರವಾಸ ಹಿಂದಿನಂತಿರಲಿಲ್ಲ. ಒಬ್ಬ ಸಾಮಾನ್ಯ ಪ್ರವಾಸಿನಾಗಿ ಹೋಗಿದ್ದರೇ ಹೊರತು ನಟನಾಗಿ ಹೋಗಿರಲಿಲ್ಲ. ಕಳೆದ ವಾರ 18ಕ್ಕೆ ಮಗ ವಿನೀಶ್ ಹಾಗೂ ಸ್ನೇಹಿತ ಮಲ್ಲಿಕಾರ್ಜುನ್ ಜೊತೆ ಲಂಡನ್‍ಗೆ ತೆರಳಿದ್ದು, ಒಂದು ವಾರ ಯೂರೋಪ್ ಟ್ರಿಪ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ತನ್ನ ಮಗನೊಂದಿಗೆ ಅಪರೂಪದ ಪ್ರವಾಸವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಲಂಡನ್‍ನಲ್ಲಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಸಂದರ್ಶನವನ್ನೂ ಕೊಟ್ಟು ಬಂದಿದ್ದಾರೆ.
Advertisement
ಅಕ್ಟೊಬರ್ 19ಕ್ಕೆ ಪ್ರಶಸ್ತಿ ಪಡೆದಕೊಂಡು ನಂತರ ಲಂಡನ್ ಸ್ನೇಹಿತರ ಜೊತೆಗೂಡಿ ಜಾಲಿ ಟೂರ್ ಮಾಡಿದ್ದಾರೆ. ಅಲ್ಲಿನ ಕಲರ್‍ಫುಲ್ ಸ್ಥಳಗಳನ್ನು ನೋಡಿ, ಉಳಿದೆಲ್ಲ ಕೆಲಸದ ಟೆನ್ಷನ್ ಅನ್ನು ಪಕ್ಕಕ್ಕಿಟ್ಟು ಸಾದಾಸೀದಾ ತಂದೆಯಂತೆ ಮಗನಿಗೆ ಇಷ್ಟವಾದ ಊಟ ತಿಂಡಿ ಕೊಡಿಸಿ ಪ್ರವಾಸ ಮುಗಿಸಿದ್ದಾರೆ.
Advertisement
Advertisement
ಲಂಡನ್‍ನಲ್ಲಿ ಕನ್ನಡಿಗರ ದೊಡ್ಡ ಕೂಟವೇ ಇದೆ. ಅಲ್ಲಿನ ಅಭಿಮಾನಿಗಳಿಗಾಗಿ ದಚ್ಚು ಪ್ರಖ್ಯಾತ ಬಿಬಿಸಿ ರೇಡಿಯೋ ಕಚೇರಿಗೆ ತೆರಳಿ ವಿಶೇಷ ಸಂದರ್ಶನ ನೀಡಿ ಬಂದಿದ್ದಾರೆ.
ದರ್ಶನ್ ಸಿನಿಮಾಗಳು ಮಾತ್ರವಲ್ಲದೇ ಪ್ರಸ್ತುತ ಕನ್ನಡ ಚಿತ್ರಗಳು ಇಂಗ್ಲೆಂಡಿನಲ್ಲಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಈ ಹಿಂದೆ ತಮ್ಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ವೇಳೆ ಲಂಡನ್‍ಗೆ ಶಿವಣ್ಣ, ರಕ್ಷಿತ್ ಶೆಟ್ಟಿ, ಗಣೇಶ್ ಸೇರಿದಂತೆ ಅನೇಕ ನಟರು ಬಿಬಿಸಿಗೆ ತೆರಳಿ ಸಂದರ್ಶನ ನೀಡಿದ್ದರು. ಹಾಗೆಯೇ ದರ್ಶನ್ ಕೂಡ ಬಿಬಿಸಿ ರೇಡಿಯೋದಲ್ಲಿ ಮಾತನಾಡಿ ಬಂದಿದ್ದಾರೆ.
ಕಳೆದ ಮಂಗಳವಾರ ಯುರೋಪ್ ಪ್ರವಾಸದಿಂದ ವಾಪಸ್ಸಾದ ದರ್ಶನ್ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ನಂತರ 28 ರಂದು ಹೈದ್ರಾಬಾದ್‍ಗೆ ತೆರಳಿ ಕುರುಕ್ಷೇತ್ರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.