ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಬ್ರಿಟಿಷ್ ಪಾರ್ಟಿಮೆಂಟ್‍ನಲ್ಲಿ ಯುಕೆ ಸರ್ಕಾರವು ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಗೆ ಭಾಜನಾಗಿರುವ ದಕ್ಷಿಣ ಭಾರತ ಹಾಗೂ ಕನ್ನಡ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲಂಡನ್ ಪಾರ್ಲಿಮೆಂಟ್ ಆಹ್ವಾನ ಮೇರೆಗೆ ತೆರೆಳಿರುವ ದರ್ಶನ್ ತಮ್ಮ ಮಗನೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ತೇಲಿಬಿಟ್ಟಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದರ್ಶನ್ ಸಾಧನೆ ಮೆಚ್ಚಿ ಯುಕೆ ಸರ್ಕಾರ ಈ ಬಾರಿ ಸಿನಿಮಾ ಕ್ಷೇತ್ರದಲ್ಲಿ ಭಾರತದಿಂದ ದರ್ಶನ್‍ರವರನ್ನು ಸನ್ಮಾನಿಸಿದೆ.
Advertisement
ಪ್ರೀತಿಯ ದಾಸ ದರ್ಶನ್ ಖ್ಯಾತಿ ಇದೀಗ ಇಂಗ್ಲೆಂಡ್ ತಲುಪಿದ್ದು, ಅಲ್ಲಿನ ಸರ್ಕಾರದ ಗೌರವ ಪ್ರಶಸ್ತಿ ನೀಡಿದೆ. ದರ್ಶನ್ ಸಿನಿಮಾ ಇಂಡಸ್ಟ್ರಿಗೆ ಬಂದು ಸುಮಾರು 20 ವರ್ಷ ಆಗುತ್ತಾ ಬಂದಿದೆ. ಇದುವರೆಗೂ ದರ್ಶನ್ ಯಾವುದೇ ಪ್ರಶಸ್ತಿಯ ಫಲಾಪೇಕ್ಷೆ ಇಲ್ಲದೆ ಅಭಿನಯಿಸುತ್ತಾ ಬಂದಿರುವ ನಟ. ಹಾಗಿದ್ರೂ ದರ್ಶನ್ ಅವರ ಕಲಾಸೇವೆಯನ್ನ ಮೆಚ್ಚಿ ಅನೇಕ ಪ್ರಶಸ್ತಿಗಳು ಬಂದಿವೆ. ಇದೀಗ ಇಂಗ್ಲೆಂಡ್ ಪಾರ್ಲಿಮೆಂಟ್ ನಿಂದ ಭಾರತೀಯರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ.
Advertisement
Advertisement
ಲಂಡನ್ ಸರ್ಕಾರದಿಂದ ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನಿಸಲಾಗುತ್ತದೆ. ಭಾರತ ಮೂಲದ ವಿರೇಂದ್ರ ಶರ್ಮಾ ಲಂಡನ್ ಪಾರ್ಲಿಮೆಂಟ್‍ನಲ್ಲಿ ಸಂಸದರಾಗಿದ್ದು, ಈ ಹಿಂದೆ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.
Advertisement
ಪ್ರಸ್ತುತ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು ಇದರ ನಡುವೆಯೇ ಲಂಡನ್‍ಗೆ ಪ್ರಯಾಣ ಬೆಳೆಸಿದ್ದರು. ಲಂಡನ್ ಪಾರ್ಲಿಮೆಂಟ್ ಭವನದಲ್ಲಿ ದರ್ಶನ್‍ರನ್ನು ಸನ್ಮಾನಿಸಿ ಗೌರವ ಪ್ರಶಸ್ತಿ ನೀಡಲಾಯಿತು. ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ದರ್ಶನ್ ಕೊಡುಗೆಯನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ.
British Parliament honoring @dasadarshan got an invitation from British Parliament Virendra Sharma, Member of parliament, pic.twitter.com/CCBdv7iUA7
— D Company(R)Official (@Dcompany171) October 17, 2017
All set to make it to the Event in London Along with my Son Vineesh ???? pic.twitter.com/c3LLWheXCj
— Darshan Thoogudeepa (@dasadarshan) October 19, 2017
ಬ್ರಿಟಿಷ್ ಪಾರ್ಲಿಮೆಂಟ್ ಇಂದ ನಮ್ಮ ಡಿ ಬಾಸ್ ಗೆ ಪ್ರಶಸ್ತಿ ಸನ್ಮಾನಕ್ಕೆಂದು ಆಹ್ವಾನ ಪತ್ರ ☺️ #ChallengingStar @dasadarshan #DBoss ???????? pic.twitter.com/Iwveq2Ox0j
— D Company(R)Official (@Dcompany171) October 17, 2017
ನಲ್ಮೆಯಸಹೋದರ ದರ್ಶನ್ ನಿನಗೆ ದೊರಕಿದಸನ್ಮಾನ ಕನ್ನಡಿಗರಿಗೆ ಹಾಗು ಕನ್ನಡಚಿತ್ರರಂಗಕ್ಕೆ ಅತೀವಆನಂದ ಉಂಟುಮಾಡಿದೆ.ಕನ್ನಡಕ್ಕೆ ನಿನ್ನಿಂದ ಅಂತರರಾಷ್ಠ್ರಮನ್ನಣೆ.. ಶುಭಮಸ್ತು pic.twitter.com/lbf0jPvlcZ
— ನವರಸನಾಯಕ ಜಗ್ಗೇಶ್ (@Jaggesh2) October 18, 2017