ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ‘ರಾಬರ್ಟ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ಈ ಮಧ್ಯೆ ಬ್ಯಾಟು ಬಾಲ್ ಹಿಡಿದು ಫೀಲ್ಡ್ಗೆ ಇಳಿದಿದ್ದಾರೆ.
ಹೌದು. ‘ಡಿ ಬ್ರದರ್ಸ್ ಪ್ರೀಮಿಯರ್ ಲೀಗ್’ ಎರಡನೇ ಸೀಸನ್ಗೆ ಶನಿವಾರ ಅದ್ಧೂರಿ ಚಾಲನೆ ಸಿಕ್ಕಿತ್ತು. ಬೆಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ.
ರಾಜ್ಯದ ಮೂಲೆ ಮೂಲೆಯಲ್ಲಿರುವ ದಚ್ಚು ಅಭಿಮಾನಿಗಳು ಡಿಪಿಎಲ್ ನಲ್ಲಿ ಭಾಗಿಯಾಗಿ ಸಂತಸಪಡಿಸಿದ್ದಾರೆ. ದರ್ಶನ್ ಅಭಿಮಾನಿಗಳು ಈ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದು, ಒಟ್ಟು 10 ತಂಡಗಳು ಈ ಪಂದ್ಯಾಟದಲ್ಲಿ ಭಾಗಿಯಾಗಿದೆ.
ಕಳೆದ ವರ್ಷ ಕಿಚ್ಚ ಸುದೀಪ್ ಕನ್ನಡ ಚಲನಚಿತ್ರ ಕಪ್ ಪ್ರಾರಂಭಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಡಿಪಿಎಲ್ ಕ್ರಿಕೆಟ್ ಪ್ರಾರಂಭಿಸಿದ್ದರು.