ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಬಗ್ಗೆ ಕಾಳಜಿ ಮೂಡಿಸೋಕೆ ಮುಂದಾಗಿದ್ದು, ಇದೀಗ `ಹೆಣ್ಣು ಭ್ರೂಣ ಹತ್ಯೆ ಮಹಾಪಾಪ’ ಬಗ್ಗೆ ಜಾಗೃತಿ ಮೂಡಿಸೋಕೆ ತಯಾರಾಗಿದ್ದಾರೆ.
ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ತಯಾರಾಗಿರುವ ಕಿರುಚಿತ್ರವೊಂದಕ್ಕೆ ದರ್ಶನ್ ಬೆನ್ನುಲುಬಾಗಿ ನಿಂತಿದ್ದಾರೆ. `ಮಾತೃಜನನ’ ಹೆಸರಲ್ಲಿ ನಿರ್ಮಾಣವಾಗಿರುವ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿಕೊಡುವುದರ ಮೂಲಕ ಹೊಸ ಪ್ರತಿಭೆಗಳಿಗೆ ಬೆಂಬಲ ಸೂಚಿಸಿದ್ದಾರೆ.
Advertisement
Advertisement
ಸಾಮಾನ್ಯವಾಗಿ ದರ್ಶನ್ ಹೊಸಬರ ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಾರೆ. ಇದೀಗ ಮಾತೃಜನನ ತಂಡಕ್ಕೂ ಸಾಥ್ ಕೊಟ್ಟಿದ್ದಾರೆ. ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ಕಿರುಚಿತ್ರ ಮಾಡಿದ್ದೇವೆ ಅಂತ ಚಿತ್ರತಂಡ ಹೇಳಿದ ತಕ್ಷಣ ದರ್ಶನ್ ಏನು ಯೋಚಿಸದೇ ಮನೆಗೆ ಕರೆಸಿಕೊಂಡು ಚಿತ್ರದ ಟೀಸರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಅಲ್ಲದೇ ಈ ಕಿರುಚಿತ್ರ ಪ್ರದರ್ಶನಕ್ಕೆ ಕಲಾವಿದರ ಸಂಘದ ಭವನದಲ್ಲಿ ಅವಕಾಶ ಕೂಡ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!
Advertisement
`ಮಾತೃಜನನ’ ಕಿರುಚಿತ್ರವನ್ನು ನಿಶಾಂತ್ ಮೇಗಳಮನೆ ಹಾಗೂ ಸುಮುಖ ಶರ್ಮಾ ನಿರ್ದೇಶನ ಮಾಡಿದ್ದಾರೆ. ಇಡೀ ವಿಶ್ವದಲ್ಲಿ ಅತೀ ಹೆಚ್ಚು ಹೆಣ್ಣು ಶಿಶು ಹತ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಕಳಂಕವನ್ನು ತೊಡೆದು ಹೆಣ್ಣುಭ್ರೂಣ ಹತ್ಯೆಯ ತಡೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ತಯಾರಾಗಿದ್ದಾರೆ.