ದರ್ಶನ್ ಮುಡಿಗೇರಿತು ಮತ್ತೊಂದು ಬಿರುದು

Public TV
1 Min Read
Darshan 3 900x600 1

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಈಗಾಗಲೇ ಅನೇಕ ಬಿರುದುಗಳಿವೆ. ಅವರ ಸರಳ ವ್ಯಕ್ತಿತ್ವ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಅನೇಕ ಹೆಸರಿನಿಂದ ಅವರನ್ನು ಕರೆಯುತ್ತಾರೆ.

ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ದಚ್ಚು ಹೀಗೆ ಅನೇಕ ಹೆಸರಿನಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇಷ್ಟು ಹೆಸರಿನ ಜೊತೆಗೆ ದರ್ಶನ್ ಅವರಿಗೆ ಈಗ ಮತ್ತೊಂದು ಬಿರುದು ಅವರ ಮುಡಿಗೆ ಸೇರಿಕೊಂಡಿದೆ.

ದರ್ಶನ್ ಅವರ ಸ್ನೇಹಿತ ಹಾಗೂ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ. ನಾಗೇಂದ್ರ ಪ್ರಸಾದ್ ಅವರು `ಶತಸೋದರಾಗ್ರಜಾ ಶರವೀರ’ ಎಂದು ಹೊಸ ಬಿರುದನ್ನು ನೀಡಿದ್ದಾರೆ.

Darshan Kannada 1

ದರ್ಶನ್ ನೂರಾರು ಜನರ ಸಹೋದರ ಹಾಗೂ ತಮ್ಮ ಸುತ್ತಮುತ್ತ ಇರುವವರನ್ನ ಸಹೋದರರಂತೆ ಕಾಣುತ್ತಾರೆ. ಈ ಕಾರಣಕ್ಕೆ ಶತಸೋದರಾಗ್ರಜಾ ಎಂದು ಕರೆಯಲಾಗಿದೆ. ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿರುವ ಕಾರಣ ಶರವೀರ ಎಂದು ಬಿರುದು ನೀಡಲಾಗಿದೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ವಿ.ನಾಗೇಂದ್ರ ಪ್ರಸಾದ್ ಅಭಿನಯಿಸಿ ನಿರ್ದೇಶನ ಮಾಡಿರುವ ಗೂಗಲ್ ಸಿನಿಮಾದ ಹಾಡುಗಳನ್ನು ದರ್ಶನ್ ವೀಕ್ಷಣೆ ಮಾಡಿದ್ದು, ಹಾಡುಗಳನ್ನ ಮೆಚ್ಚಿಕೊಂಡು ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಮುಗಿಸಿ ಪ್ರಚಾರ ಪ್ರಾರಂಭ ಮಾಡಿರುವ ಗೂಗಲ್ ಚಿತ್ರ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.

Darshan 1

Darshan 4

Darshan 2

darshan 2

Darshan

DARSHAN RACHITHA 9

DARSHAN RACHITHA 8

darshan 4

Share This Article
Leave a Comment

Leave a Reply

Your email address will not be published. Required fields are marked *