ಮಂಡ್ಯ: ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಮೃತಪಟ್ಟಿದ್ದಾಳೆ.
ಪೂರ್ವಿಕಾ(10) ಮೃತಪಟ್ಟ ದರ್ಶನ್ ಅಭಿಮಾನಿ. ಪೂರ್ವಿಕಾ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಮಾದ ನಿವಾಸಿಯಾಗಿದ್ದು, ದರ್ಶನ್ ಅನ್ನು ನೋಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಳು. ಪೂರ್ವಿಕಾಳನ್ನು ಭೇಟಿಯಾಗಿ ದರ್ಶನ್ ಆಕೆಯ ಆಸೆಯನ್ನು ಕೂಡ ಈಡೇರಿಸಿದ್ದರು. ಆದರೆ ಶುಕ್ರವಾರ ಪೂರ್ವಿಕಾ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ.
ದರ್ಶನ್ ಈ ಹಿಂದೆ ಪೂರ್ವಿಕಾಳ ಚಿಕಿತ್ಸೆಗೆ ಹಣ ನೀಡಿದ್ದರು. ಅಲ್ಲದೇ ಆಕೆಯ ಜನ್ಮ ದಿನದಂದು ಖುದ್ದಾಗಿ ಭೇಟಿಯಾಗಿ ಶುಭಾಶಯ ತಿಳಿಸಿದ್ದರು. ಪೂರ್ವಿಕಾ ಹುಟ್ಟುಹಬ್ಬ ದಿನದಂದು ದರ್ಶನ್ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ತಿಳಿಸಿದ್ದರು. ಖುಷಿ ಖುಷಿಯಾಗಿ ಬಾಲಕಿ ತನ್ನ ನೆಚ್ಚಿನ ನಾಯಕನ ಜೊತೆಗೆ ಕೆಲಹೊತ್ತು ಕಾಲ ಕಳೆದಿದ್ದಳು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಪೂರ್ವಿಕಾ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಳು. `ಯಜಮಾನ’ ಸಿನಿಮಾ ಶೂಟಿಂಗ್ ವೇಳೆ ಪೂರ್ವಿಕಾ ದರ್ಶನ್ ಅವರನ್ನು ಭೇಟಿಯಾಗಿದ್ದಳು. ಈ ವೇಳೆ ಆಕೆಯ ಚಿಕಿತ್ಸೆ ನೆರವು ನೀಡುವ ಭರವಸೆಯನ್ನು ಡಿ ಬಾಸ್ ಕೊಟ್ಟಿದ್ದರು. ಆದರೆ ಈಗ ಅನಾರೋಗ್ಯದಿಂದ ಪೂರ್ವಿಕಾ ಮೃತಪಟ್ಟಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv