ಬೆಂಗಳೂರು: ಚಾಲೇಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‍ವುಡ್ ನ ದುಬಾರಿ ನಟ ಎಂದು ಕರೆಯುತ್ತಾರೆ. ಈಗಾಗಲೇ ದರ್ಶನ್ ಅತ್ಯಂತ ದುಬಾರಿಯ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಈಗ ಮತ್ತೊಂದು ಹೊಸ ಕಾರನ್ನು ಕೊಂಡುಕೊಂಡಿದ್ದಾರೆ.
ಕನ್ನಡದಲ್ಲಿ ದುಬಾರಿ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ದರ್ಶನ್ ಫೋರ್ಡ್ ಮಸ್ಟಂಗ್ (ford mustang) ಕಾರನ್ನು ಖರೀದಿಸುವ ಮೂಲಕ ತಮ್ಮ ಕಾರಿನ ಮೇಲಿನ ಪ್ರೀತಿಯನ್ನ ಮತ್ತೆ ನಿರೂಪಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ
ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಈಗ ದರ್ಶನ್ ಫೋರ್ಡ್ ಮಸ್ಟಂಗ್ ಕಾರು ಖರೀದಿಸಿದ್ದಾರೆ. ಈ ಕಾರ್ ಹಳದಿ ಬಣ್ಣದ್ದಾಗಿದ್ದು, ಈ ಕಾರಿನ ಬೆಲೆ ಬರೋಬ್ಬರಿ 75 ಲಕ್ಷ ಆಗಿದೆ. ದರ್ಶನ್ ಬಳಿ ಈಗ ಬಿಳಿ, ಕೆಂಪು, ನೀಲಿ, ಮತ್ತು ಕಪ್ಪು ಬಣ್ಣದ ಕಾರುಗಳಿವೆ. ಈಗ ಖರೀದಿಸಿರುವ ಫೋರ್ಡ್ ಮಸ್ಟಂಗ್ ಕಾರು ಹಳದಿ ಬಣ್ಣದಾಗಿದೆ.
ಈಗಾಗಲೇ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್, ಫಾರ್ಚ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಇತ್ತೀಚೆಗೆ ಲ್ಯಾಂಬೋರ್ಗಿನಿ ಕಾರ್ ಕೂಡ ಸೇರಿತ್ತು. ಫೋರ್ಡ್ ಮಸ್ಟಂಗ್ ಅವರ ಕಾರುಗಳ ಕಲೆಕ್ಷನ್ ಪಟ್ಟಿಯಲ್ಲಿ ಸೇರಿದೆ.
ಸದ್ಯಕ್ಕೆ ಕಾರು ದರ್ಶನ್ ಮನೆಗೆ ಬಂದಿಲ್ಲ. ಇನ್ನು ಕಾರಿಗೆ ಮಾರ್ಪಾಡು ಕೆಲಸಗಳು ನಡೆಯುತ್ತಿದ್ದು, ಎಲ್ಲ ಖರ್ಚು ಸೇರಿ ಸುಮಾರು ಒಂದು ಕೋಟಿ ರೂ. ಆಗಬಹುದು.