ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ನಗರದ ಜೆಪಿ ಪಾರ್ಕ್ ನಲ್ಲಿ ನಿರ್ಮಾಪಕ ಮುನಿರತ್ನ ಅವರ ನೇತೃತ್ವದಲ್ಲಿ ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವ ಸಮಾರಂಭ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ದರ್ಶನ್, ಸಿಎಂ ಯಡಿಯೂರಪ್ಪ, ಅಭಿಷೇಕ್ ಅಂಬರೀಷ್, ಶ್ರೀನಿವಾಸ್ ಮೂರ್ತಿ, ರವಿಶಂಕರ್, ಹರಿಕೃಷ್ಣ, ಯಶಸ್ಸ್ ಸೂರ್ಯ, ಶಾಸಕ ಬೈರತಿ ಬಸವರಾಜ್ ಭಾಗವಹಿಸಿದ್ದರು. ವೇದಿಕೆಗೆ ಆಗಮಿಸಿದ ದರ್ಶನ್ ಸಿಎಂ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿದರು. ಬಳಿಕ ಎಲ್ಲರನ್ನೂ ಮಾತನಾಡಿಸಿ ತಮ್ಮ ಆಸನದ ಮೇಲೆ ಕುಳಿತುಕೊಂಡರು.
Advertisement
Advertisement
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 30 ಅಡಿ ಶಿವನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಮೆಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದಾರೆ. ಆಹೋ ರಾತ್ರಿ ಜಾಗರಣೆ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
Advertisement
ಕುರುಕ್ಷೇತ್ರ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಭೀಷ್ಮನ ಪಾತ್ರ ಮಾಡಿದ್ದರು. ಹೀಗಾಗಿ ಅವರ ಪರವಾಗಿ ನೆನಪಿನ ಕಾಣಿಕೆ ಸ್ವೀಕರಿಸಲು ಅಭಿಷೇಕ್ ಅಂಬರೀಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
Advertisement
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಷಯ ಕೋರಿದರು. ಅಪರೂಪದ ಮತ್ತು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ಮುನಿರತ್ನ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಒಂದು ಗಂಟೆಗಳ ಕಾಲ ಇದ್ದು ಸಮಾರಂಭವನ್ನ ನೋಡಿದ್ದೇನೆ ಖುಷಿ ಆಗಿದೆ ಎಂದು ತಿಳಿಸಿದರು.