ಬೆಂಗಳೂರು: ಸ್ಯಾಂಡಲ್‍ವುಡ್‍ನ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ತಡರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ರೆಬೆಲ್ ಸ್ಟಾರ್ ಅಂಬರೀಶ್ ನಿಧನ ಹಿನ್ನೆಲೆ ಅದ್ಧೂರಿ ಹುಟ್ಟುಹಬ್ಬ ಆಚರಿಸದಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಯಾವುದೇ ಪಟಾಕಿ ಹೊಡೆಯದಂತೆ, ಕೇಕ್, ಹೂವಿನ ಹಾರವನ್ನು ತರದಂತೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ತಡರಾತ್ರಿ ಕೇಕ್ ಕಟ್ ಮಾಡಲಿಲ್ಲ. ದರ್ಶನ್ ಮನವಿ ಹಿನ್ನೆಲೆ ತಮ್ಮ ನೆಚ್ಚಿನ ನಟನ ನೋಡಲು ಬಂದಿದ್ದ ಅಭಿಮಾನಿಗಳು ಹೂವಿನ ಹಾರ ತರದೇ ಬರೀ ಕೈಯಲ್ಲಿ ಬಂದು ಶುಭಾಶಯ ತಿಳಿಸಿದರು. ಹಲವು ಅಭಿಮಾನಿಗಳು ಬರುವಾಗ ಅಕ್ಕಿ ಸೇರಿದಂತೆ ಇತರೆ ಧಾನ್ಯಗಳನ್ನು ತಂದಿದ್ದರು.
ಇನ್ನು ಪುಲ್ವಾಮಾ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ ಮಾತನಾಡಿದ ದರ್ಶನ್ ಯೋಧರೇ ನಿಜವಾದ ಹೀರೋಗಳು. ಈ ಬಾರಿ ಸರಳ ಬರ್ತ್ ಡೇ ಆಚರಣೆಗೆ ಕಾರಣ ಕಳೆದ ಬಾರಿ ಆಚರಣೆ ವೇಳೆ ನಾಲ್ಕು ಲಾರಿಗಳಷ್ಟು ಹೂವಿನ ಹಾರ, ಕೇಕ್‍ಗಳು ವೇಸ್ಟ್ ಆಗಿತ್ತು. ಬಿಬಿಎಂಪಿಯ ನಾಲ್ಕು ಲಾರಿಗಳಲ್ಲಿ ಹೂಗಳು, ಕೇಕ್ ತುಂಬಿಕೊಂಡು ಹೋದಾಗ ನೋವಾಗಿತ್ತು. ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳು ಕೇಕ್ ಮತ್ತು ಹಾರದ ಜೊತೆಗೆ ಬರೋದು ಬೇಡ, ಬೇಕಾದ್ರೆ ಧವಸ ಧಾನ್ಯಗಳನ್ನು ತಂದು ಕೊಟ್ಟರೆ ಅವಶ್ಯಕತೆ ಇರೋವರಿಗೆ ನೀಡುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv