ಬೆಂಗಳೂರು: 63ನೇ ಕನ್ನಡ ರಾಜ್ಯೋತ್ಸವದಂದು ಗೆಳೆಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರನ್ನು ವಿದೇಶದಲ್ಲಿ ಗೌರವಿಸಲಾಗಿದೆ.
ಇತ್ತೀಚೆಗೆ ಕತಾರ್ ದೇಶದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಆ ದೇಶದ ಕನ್ನಡ ಸಂಘವೊಂದು ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸೃಜನ್ ಲೋಕೇಶ್ ಅತಿಥಿಯಾಗಿ ಭಾಗವಹಿಸಿದ್ದರು.
Advertisement
Advertisement
ಅಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಸೃಜನ್ ಅವರನ್ನು ಅಲ್ಲಿನ ಸಂಘ ಗೌರವಿಸಿದೆ. ಕತಾರ್ ನಲ್ಲಿದ್ದ ಕನ್ನಡಿಗರು ತಮ್ಮ ನೆಚ್ಚಿನ ನಟ ದರ್ಶನ್ ಹಾಗೂ ಸೃಜನ್ ಅವರನ್ನು ನೋಡಿ ಸಂತೋಷಪಟ್ಟಿದ್ದಾರೆ.
Advertisement
ಸದ್ಯ ದರ್ಶನ್ ಹಾಗೂ ಸೃಜನ್ ಅವರನ್ನು ಸನ್ಮಾನ ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಸನ್ಮಾನ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.
Advertisement
ಕಳೆದ ವರ್ಷ ದರ್ಶನ್ ಅವರು ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ಯುಕೆ ಸರ್ಕಾರ ನೀಡಿದ್ದ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಮೂಲಕ ಪ್ರಶಸ್ತಿಗೆ ಭಾಜನಾಗಿರುವ ದಕ್ಷಿಣ ಭಾರತ ಹಾಗೂ ಕನ್ನಡ ಮೊದಲ ಎಂಬ ಹೆಗ್ಗಳಿಕೆಗೆ ದರ್ಶನ್ ಅವರು ಪಾತ್ರರಾಗಿದ್ದರು.
ಲಂಡನ್ ಸರ್ಕಾರದಿಂದ ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನಿಸಲಾಗುತ್ತದೆ. ಭಾರತ ಮೂಲದ ವಿರೇಂದ್ರ ಶರ್ಮಾ ಲಂಡನ್ ಪಾರ್ಲಿಮೆಂಟ್‍ನಲ್ಲಿ ಸಂಸದರಾಗಿದ್ದು, ಈ ಹಿಂದೆ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.
Exclusive pic
ದುಬೈ ನ ಕತಾರ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿರುವ
ನಮ್ಮ ಪ್ರೀತಿಯ #ಯಜಮಾನ#ಬಾಕ್ಸ್_ಆಫೀಸ್_ಸುಲ್ತಾನ #ಡಿ_ಬಾಸ್ ನ ಅದ್ಬುತವಾದ ಚಿತ್ರಣಗಳು????@dasadarshan @srujanlokesh pic.twitter.com/NHhwLG8DfB
— D Family★D Hearts(R) (@DFDH7999) November 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews