ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಚಿತ್ರದಲ್ಲಿ ಮಗನ ಅಭಿನಯ ನೋಡಿ ಡಿ-ಬಾಸ್ ಜೋಡಿ ಮನಸೋತಿದ್ದಾರೆ ಹಾಗೂ ಅವರು ಪ್ರತಿಕ್ರಿಯೆ ನೀಡಿದ ವಿಡಿಯೋ ಈಗ ವೈರಲ್ ಆಗಿದೆ.
ಯಜಮಾನ ಚಿತ್ರದಲ್ಲಿ ವಿನೀಶ್ ತನ್ನ ತಂದೆ ದರ್ಶನ್ ಅವರ ಜೊತೆ ಎರಡನೇ ಬಾರಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾನೆ. ಯಜಮಾನ ಚಿತ್ರದ ಚಿತ್ರೀಕರಣದ ವೇಳೆ ವಿನೀಶ್ ಜೊತೆ ತಾಯಿ ವಿಜಯಲಕ್ಷ್ಮೀ ಕೂಡ ಭೇಟಿ ನೀಡುತ್ತಿದ್ದರು.
ಈಗ ಯಜಮಾನ ಚಿತ್ರದಲ್ಲಿ ವಿನೀಶ್ ನಟಿಸುತ್ತಿರುವಾಗ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿನೀಶ್ ಕ್ಯಾಮರಾ ಮುಂದೆ ನಟಿಸುತ್ತಿದ್ದರೆ, ದರ್ಶನ್ ಹಾಗೂ ವಿಜಯಲಕ್ಷ್ಮೀ ಅದನ್ನು ನೋಡಿ ಖುಷಿಪಡುತ್ತಿದ್ದಾರೆ.
ಯಜಮಾನ ಚಿತ್ರ ಬಿಡುಗಡೆ ಆಗುವ ಮುನ್ನವೇ ನರ್ತಕಿ ಚಿತ್ರಮಂದಿರದಲ್ಲಿ ವಿನೀಶ್‍ನ 30 ಅಡಿ ಎತ್ತರದ ಕಟೌಟ್ ಹಾಕಲಾಗಿತ್ತು. ಈ ಚಿತ್ರದಲ್ಲಿ ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾನೆ. ಈ ಹಾಡಿನಲ್ಲಿ ಅಪ್ಪ- ಮಗ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv