ಪ್ರಾಣಿಗಳನ್ನು ದತ್ತು ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Public TV
1 Min Read
Darshan 1

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯರು ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇದೀಗ ದರ್ಶನ್ ನಗರದ ಚಾಮರಾಜೇಂದ್ರ ಮೃಗಾಲಯದಿಂದ ಒಂದು ಆನೆ ಹಾಗೂ ಒಂದು ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ.

Darshan 4

ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿರುವ ದರ್ಶನ್ ಮೂರು ವರ್ಷದಿಂದ ಹುಲಿ ಮತ್ತು ಆನೆಯನ್ನು ದತ್ತು ಪಡೆದುಕೊಂಡಿದ್ದಾರೆ. ಈಗ ಮತ್ತೆ ಅದೇ ಪ್ರಾಣಿಗಳನ್ನು ಒಂದು ವರ್ಷದ ಅವಧಿಗಾಗಿ ದತ್ತು ಪಡೆದುಕೊಂಡಿದ್ದಾರೆ. ಈಗಾಗಲೇ ದರ್ಶನ್ ಮೃಗಾಲಯಕ್ಕೆ 2 ಲಕ್ಷ 75 ಸಾವಿರ ರೂ. ಹಣವನ್ನು ಸಹ ಪಾವತಿ ಮಾಡಿದ್ದಾರೆ.

Darshan 3

ದರ್ಶನ್ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿದ್ದು, ಅನೇಕ ಕುದುರೆ ಮತ್ತು ಹಸುಗಳನ್ನು ಸಾಕಿದ್ದಾರೆ.

Darshan 2

mys zoo 1

mys zoo 2

 

Share This Article
Leave a Comment

Leave a Reply

Your email address will not be published. Required fields are marked *