ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ಗೆ (DCM DK Shivakumar) ಹೊಸ ಲೋಕದಲ್ಲಿ ಶೋಕ ಕಾಣಬಹುದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಶೋಕಾಚರಣೆಯನ್ನು ವಿದೇಶದಲ್ಲೇ ಮಾಡಲು ಹೋಗಿರಬೇಕು. ಕರ್ನಾಟಕದಲ್ಲೂ ಶೋಕಾಚರಣೆ ಇದೆ. ಅವರಿಗೆ ಈ ಲೋಕದಲ್ಲಿ ಶೋಕ ಕಾಣುತ್ತಿಲ್ಲ. ಹೊಸ ಲೋಕದಲ್ಲಿ ಅವರಿಗೆ ಶೋಕ ಕಾಣಬಹುದು, ಹಾಗಾಗಿ ಹೋಗಿರಬಹುದು. ರಾಹುಲ್ ಗಾಂಧಿಯವರು ಸಹ ವಿದೇಶಕ್ಕೆ ಹೋಗಿದ್ದಾರೆ. ರಾಹುಲ್ ಅವರಿಗೆ ಒಂಟಿತನ ಕಾಡುತ್ತಿದೆ. ಅವರು ಮೊದಲಿನಿಂದಲೂ ಹೊರಗೆ ಹೋಗುತ್ತಾರೆ. ಹಾಗಾಗಿ ಅದರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ಹೇಳಿದರು.ಇದನ್ನೂಓದಿ: ವಿಷಾಹಾರ ಸೇವಿಸಿ 80ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಅಸ್ವಸ್ಥ – ಸೇನಾಧಿಕಾರಿ ಮೇಲೆ ಸ್ಥಳೀಯರಿಂದ ಹಲ್ಲೆ
Advertisement
Advertisement
ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವಂತೆ ಅವರ ಕುಟುಂಬ ಆಗ್ರಹಿಸಿದೆ. ಸಿಬಿಐಗೆ ವಹಿಸಬೇಕು, ಇಲ್ಲದಿದ್ದರೆ ನ್ಯಾಯ ಸಿಗಲ್ಲ. ಆದರೆ ಪ್ರಿಯಾಂಕ್ ಖರ್ಗೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ನಮಗೆ ಸವಾಲ್ ಹಾಕಿದ್ದಾರೆ. ನೀವು ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ ಎಂದು ಸವಾಲ್ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ರೈಟು ಲೆಫ್ಟ್ನಲ್ಲಿವವರೇ ಆತ್ಮಹತ್ಯೆಗೆ ಕಾರಣೀಕರ್ತರು. ನಿಮಗೆ ಉತ್ತರ ಕೊಡಲು ಭಯನಾ? ಪ್ರಿಯಾಂಕ್ ಖರ್ಗೆ ಉದ್ಧಟತನ ಬದಿಗಿರಿಸಬೇಕು, ಸ್ವಪ್ರತಿಷ್ಠೆ ಬಿಡಬೇಕು ಎಂದು ಕಿಡಿಕಾರಿದ್ದಾರೆ.
Advertisement
ನಾವು ಪ್ರಿಯಾಂಕ್ ಖರ್ಗೆಯವರನ್ನ ಟಾರ್ಗೆಟ್ ಮಾಡುತ್ತಿಲ್ಲ. ಬಟ್ಟೆ ಹರಿದುಕೊಳ್ಳುವುದು ಬಿಜೆಪಿ ಅಲ್ಲ, ಬಟ್ಟೆ ಹರಿದುಕೊಳ್ಳುವ ಕೆಲಸ ಮಾಡಿರುವುದು ನೀವು, ನಾವೇನು ನಿಮ್ಮ ಬಟ್ಟೆ ಹರಿಯಲ್ಲ. ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕು ಹಾಗೆಯೇ ಎದುರಿಸಿ, ನ್ಯಾಯ ಕೊಡುವ ಕೆಲಸ ಮಾಡಿ. ರಾಜೀನಾಮೆ ತೀರ್ಮಾನ ನಿಮ್ಮದು ಹೋರಾಟ ನಮ್ಮದು ಎಂದಿದ್ದಾರೆ.ಇದನ್ನೂಓದಿ: Year 2024 – ಸೋಲು – ಗೆಲುವಿನ ʻಆಟʼ
Advertisement
ಇಂದು (ಡಿ.31) ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ನಾಲ್ಕು ದಿನಗಳ ಕಾಲ ಕೆನಡಾ ಹಾಗೂ ಟರ್ಕಿ ಪ್ರವಾಸಕ್ಕೆ ತೆರಳಿದ್ದು, ಜ.04 ರಂದು ವಾಪಸಾಗಲಿದ್ದಾರೆ.