ಬೆಂಗಳೂರು: ಜಗ್ಗಲ್ಲ, ಬಗ್ಗಲ್ಲ ಅಂದವರು ಸೋಮವಾರ ಯಾಕೆ ಸೈಟ್ ವಾಪಸ್ ಪತ್ರ ಮೂಲಕ ಜಗ್ಗಿದ್ರು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswami) ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಲೇವಡಿ ಮಾಡಿದ್ದಾರೆ.
ಸಿಎಂ ಪತ್ನಿ ಮುಡಾ ಸೈಟ್ (MUDA Site Scam) ವಾಪಸ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಾಚಾ ಅಲ್ಲ ಎಂದು ಗೊತ್ತಾಗಿದೆ. ಇನ್ನೂ ಸೈಟ್ ವಾಪಸ್ ಅಧಿಕೃತ ಆಗಿಲ್ಲ. ಅದರಲ್ಲಿ ದಿನಾಂಕ ಇಲ್ಲ. ಈ ಹಿಂದೆ ಹ್ಯೂಬ್ಲೊಟ್ ವಾಚ್ ವಾಪಸ್ ಕೊಟ್ಟರು. ಅದು ಕಳವು ಮಾಲು ಅಂತ ಗೊತ್ತಾಗಿ ವಾಪಸ್ ಕೊಟ್ಟು ತಪ್ಪಿಸಿಕೊಂಡರು ಎಂದು ಟೀಕಿಸಿದರು. ಇದನ್ನೂ ಓದಿ: ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ, ರಾಜೀನಾಮೆ ಕೊಡಲ್ಲ: ಸಿಎಂ ಸ್ಪಷ್ಟನೆ
ಯಡಿಯೂರಪ್ಪ ಅವರು ಸೈಟ್ ವಾಪಸ್ ಕೊಟ್ಟಿದ್ದಾಗ, ತಪ್ಪು ಒಪ್ಪಿಕೊಂಡತಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಸಿದ್ದರಾಮಯ್ಯ ಸೈಟ್ ವಾಪಸ್ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಸೋಮವಾರ ಸೈಟ್‌ಗಳನ್ನು ವಾಪಸ್ ಕೊಟ್ಟಮೇಲೆ 95% ತನಿಖೆ ಮುಗಿದಂತೆ. ಉಳಿದಿದ್ದು 5% ತನಿಖೆ ಮಾತ್ರ. ಅಲ್ಲಿಗೆ ಸಿದ್ದರಾಮಯ್ಯ ಹಗರಣಗಳ ವೀರ, ಮೋಸ್ಟ್ ಕರಪ್ಟ್ ಸಿಎಂ ಅಂತ ಸಾಬೀತು ಆಯಿತು. ಒಂದೇ ಒಂದು ಕಪ್ಪು ಚುಕ್ಕೆ ತೋರಿಸಿ ಅಂದಿದ್ದರು. ಈಗ ಅವರೇ ಅವರ ಕಪ್ಪು ಚುಕ್ಕೆ ತೋರಿಸಿಕೊಂಡಿದ್ದಾರೆ. ಇನ್ನು ನಿಧಾನ ಮಾಡೋದು ಬೇಡ. ರಾಜೀನಾಮೆ ಕೊಡಿ. ಸಿದ್ದರಾಮಯ್ಯ ಜೊತೆಗಿದ್ದವರೇ ಗುಂಡಿ ತೋಡಿರೋದು. ಸಿದ್ದರಾಮಯ್ಯ ಆ ಗುಂಡಿಗೆ ಬಿದ್ದರು. ತಕ್ಷಣ ಅವರು ರಾಜೀನಾಮೆ ಕೊಡಬೇಕು. ಕೆಲವರು ಉದ್ದ ಮೂಗು ಮಾಡಿಕೊಂಡು ನಿಮ್ಮ ಪರ ಸಮರ್ಥನೆ ಮಾಡಿದ್ದಾರೋ ಅವರು ಕೂಡ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನೆಲಮಂಗಲ – ಹಿರಿಯ ಇತಿಹಾಸ ತಜ್ಞ ಗೋಪಾಲ ರಾವ್ ವಿಧಿವಶ
ನಮಗೆ ಇವತ್ತು ಬಹಳ ಖುಷಿ ಆಗಿದೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಸೋಲು ಒಪ್ಪಿಕೊಂಡಿದೆ. ಇದು ನಮಗೆ ಬಿಜೆಪಿ ಗೆದ್ದಷ್ಟೇ ಖುಷಿ ಕೊಟ್ಟಿದೆ. ಇನ್ನು ಉದ್ಧಟತನ ಮಾಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ
ತಮ್ಮ ವಿರುದ್ಧ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಹಾಗಾಗಿ ಅವರಿಗೆ ಟಿಕೆಟ್ ಕೊಡಬೇಡಿ ಎಂದು ನಾನು ಹೈಕಮಾಂಡ್‌ಗೆ ಹೇಳಿದ್ದು ಹೌದು. ಆದರೆ ಅನಂತ್ ಕುಮಾರ್ ಹೆಗಡೆ ವಿರುದ್ಧ ನಾನು ಇಲ್ಲ. ಅವರು ಹಿಂದುತ್ವದ ಗಟ್ಟಿ ದನಿ. ಆದರೆ ಸಂವಿಧಾನ ವಿಚಾರಕ್ಕೆ ಅವರನ್ನು ವಿರೋಧಿಸಿದ್ದೆ. ನಾನೇ ಅವರಿಗೆ ಟಿಕೆಟ್ ತಪ್ಪಿಸಿದೆ ಅಂತ ಹೇಳಿಲ್ಲ. ಟಿಕೆಟ್ ತಪ್ಪಿಸಲು ನಾನು ಬಿಜೆಪಿ ರಾಜ್ಯಾಧ್ಯಕ್ಷ ಅಲ್ಲ. ಆದರೆ ಅವರ ಬೆಂಬಲಿಗರ ಪ್ರತಿಭಟನೆಯನ್ಮು ಗೌರವಿಸುತ್ತೇನೆ ಎಂದರು. ಇದನ್ನೂ ಓದಿ: ಅಣ್ಣನಿಗೆ ಆಗದೇ ಇರೋರು ಹಗರಣ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು: ಸಿಎಂ ಸಹೋದರ