ಬೆಂಗಳೂರು: ಚಿತ್ರದುರ್ಗದಲ್ಲಿ ಅಹಿಂದ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಗಳಿಗೆ ಏಕವಚನ ಪ್ರಯೋಗ ಮಾಡಿದ್ದಾರೆ. ಸೋನಿಯಾ ಗಾಂಧಿಯವರಿಗೂ ಸಿದ್ದರಾಮಯ್ಯ (Siddaramaiah) ಹೀಗೇ ಏಕವಚನದಲ್ಲಿ ಮಾತಾಡಿದ್ದಾರಾ? ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಹಾಗೂ ಖರ್ಗೆಯವರಿಗೂ ಇವರು, ಇವನು, ಅವನು ಎಂದು ಏಕವಚನದಲ್ಲಿ ಕರೆಯುತ್ತಾರಾ? ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ನಗರದ ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಒಬ್ಬ ದಲಿತ ಹೆಣ್ಣು ಮಗಳಾಗಿರುವ ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿರೋದು ಖಂಡನೀಯ. ಹಳ್ಳಿಗಳಲ್ಲಿ ಹಾಗೇ ಕರೆಯೋದು ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮೂಲಕ ಹಳ್ಳಿ ಜನರನ್ನೂ ಸಿಎಂ ಅಪಮಾನ ಮಾಡಿದ್ದಾರೆ. ಹಳ್ಳಿ ಜನರು ಎಲ್ಲರನ್ನೂ ಗೌರವದಿಂದ ಮಾತಾಡಿಸುತ್ತಾರೆ. ಸಿದ್ದರಾಮಯ್ಯ ಯಾಕೆ ಇಷ್ಟು ಸುಳ್ಳು ಹೇಳುತ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ, ಅಹಂಕಾರ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್
ರಾಷ್ಟ್ರಪತಿಗಳ ಬಣ್ಣದ ಬಗ್ಗೆಯೂ ಸಿದ್ದರಾಮಯ್ಯನವರು ಈ ಹಿಂದೆ ಕಾಮೆಂಟ್ ಮಾಡಿದ್ದರು. ನೀವು ಭಾಷೆ ಸರಿಪಡಿಸಿಕೊಳ್ಳಲು ಒಬ್ಬ ಟೀಚರ್‍ನ್ನು ನೇಮಿಸಿಕೊಳ್ಳಿ. ನಾನೇ ಬೇಕಾದ್ರೆ ನಿಮಗೆ ಟೀಚರ್ ಆಗಿ ಬಂದು ಭಾಷೆ ಬಳಕೆ ಹೇಳಿಕೊಡುತ್ತೇನೆ ಎಂದಿದ್ದಾರೆ.
ಕೆರೆಗೋಡು ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರ ಯಾರನ್ನೂ ಓಲೈಸಿ ಹೀಗೆ ಮಾಡ್ತಿದೆ? ಪೊಲೀಸರು ಬೂಟ್ ಕಾಲಿನಲ್ಲಿ ಸಂಜೆ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ನಿಯಮಗಳಿವೆ, ಅದನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ