– ಕಠಿಣ ಕ್ರಮ ಕೈಗೊಳ್ಳದಿದ್ರೆ ಅಧಿಕಾರ ಬಿಟ್ಟು ತೊಲಗಿ
– ಫಾಜಿಲ್ ಕುಟುಂಬದ ಸಮರ್ಥನೆಗೆ ಹೋಗಿ ಖಾದರ್ ಬೆತ್ತಲಾಗಿದ್ದಾರೆ
ಬೆಂಗಳೂರು: ಹಿಂದೂ ಕಾರ್ಯಕರ್ತರನ್ನ ಸರ್ಕಾರವೇ ಟಾರ್ಗೆಟ್ ಮಾಡುತ್ತಿದೆ. ಸರ್ಕಾರದ ಪ್ರೇರೇಪಣೆಯಿಂದಲೇ ಕಿಡಿಗೇಡಿಗಳು ಇಂತಹ ಪೋಸ್ಟ್ ಹಾಕಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswany) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಶರಣು ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲ್ ಮುಂದಿನ ಟಾರ್ಗೆಟ್ ಎಂಬ ಪೋಸ್ಟ್ ವಿಚಾರವಾಗಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇದನ್ನ ನಾನೂ ನೋಡಿದೆ. ಇದು ವ್ಯವಸ್ಥೆಯ ವೈಫಲ್ಯ. ಸುಹಾಸ್ ಶೆಟ್ಟಿಗೆ ಪೊಲೀಸರು ರಕ್ಷಣೆ ಕೊಡಲಿಲ್ಲ. ಆಯುಧ ಇಟ್ಟುಕೊಳ್ಳಲು ಅವಕಾಶ ಕೊಡಲಿಲ್ಲ. ಸುಹಾಸ್ ಬಗ್ಗೆ ಪೊಲೀಸರೇ ಸುಳಿವು ಕೊಟ್ಟ ಆರೋಪ ಇದೆ ಎಂದರು. ಇದನ್ನೂ ಓದಿ: ಬಾಲಾಕೋಟ್ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?
ಈಗ ಮತ್ತಿಬ್ಬರು ಹಿಂದೂ ಕಾರ್ಯಕರ್ತರು ಮುಂದಿನ ಟಾರ್ಗೆಟ್ ಅಂತ ಪೋಸ್ಟ್ ಹಾಕಿದ್ದಾರೆ. ಹಿಂದೂ ಕಾರ್ಯಕರ್ತರನ್ನ ಸರ್ಕಾರವೇ ಟಾರ್ಗೆಟ್ ಮಾಡ್ತಿದೆ. ಸರ್ಕಾರದ ಪ್ರೇರೇಪಣೆಯಿಂದ ಇಂತಹ ಪೋಸ್ಟ್ ಹಾಕಿದ್ದಾರೆ. ಸರ್ಕಾರದ ಕೈಮೀರಿ ಪರಿಸ್ಥಿತಿ ಹೋಗಿದೆ. ಸರ್ಕಾರ ಕಮಿಷನ್ ಕಡೆ ಗಮನ ಕೊಟ್ಟು, ಕಾನೂನು ಸುವ್ಯವಸ್ಥೆ ಮರೆತಿದೆ. ಯಾರೇ ಪೋಸ್ಟ್ ಮಾಡಿದ್ರೂ ಕೂಡಲೇ ಪೊಲೀಸರು ಅವರನ್ನು ಬಂಧಿಸಬೇಕು. ಇಲ್ಲದಿದ್ರೆ ರಕ್ತಪಾತಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಫಾಜಿಲ್ ಕುಟುಂಬ ಸರ್ಕಾರ ನೀಡಿದ್ದ ಪರಿಹಾರದ ಹಣವನ್ನು ಸುಹಾಸ್ ಕೊಲೆಗೆ ಬಳಸಿದೆ: ಸುನಿಲ್ ಕುಮಾರ್ ಆರೋಪ
ಸುಹಾಸ್ ಶೆಟ್ಟಿ (Suhas Shetty) ಮನೆಗೆ ಕಾಂಗ್ರೆಸ್ಸಿಗರು (Congress) ಹೋಗದ ಕುರಿತು ಮಾತನಾಡಿದ ಅವರು, ನೀವು ಯರ‍್ಯಾರ ಮನೆಗಳಿಗೆ ಹೋಗಿದ್ದೀರ ಗೊತ್ತಿಲ್ವಾ? ಯಾರು ಶರಣು ಪಂಪ್‌ವೆಲ್, ಭರತ್ ವಿರುದ್ಧ ಪೋಸ್ಟ್ ಹಾಕಿದ್ದಾರೋ ಅವರ ಮನೆಗೆ ನುಗ್ಗಿ ಬಂಧಿಸಿ ತನ್ನಿ. ಯಾರು ಸಮಾಜ ವಿರೋಧಿ ಕೃತ್ಯ ಮಾಡ್ತಾರೋ ಅವರ ವಿರುದ್ಧ ಶೂಟ್ ಅಂಡ್ ಸೈಟ್ ಆರ್ಡರ್ ಮಾಡಿ ಮಾಹಿತಿ ತರಿಸಿಕೊಳ್ಳುತ್ತೇನೆ. ಕ್ರಮ ತೆಗೆದುಕೊಳ್ಳುತ್ತೇವೆ ಅನ್ನೋದು ಬಿಡಿ. ಕಠಿಣ ಕ್ರಮ ಕೈಗೊಳ್ಳದಿದ್ರೆ ಅಧಿಕಾರ ಬಿಟ್ಟು ತೊಲಗಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜಾ
ಸುಹಾಸ್ ಕೊಲೆಯಲ್ಲಿ ಫಾಜಿಲ್ ಕುಟುಂಬದ ಪಾತ್ರ ಇಲ್ಲ ಎಂಬ ಸ್ಪೀಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಫಾಜಿಲ್ ಕುಟುಂಬದ ಸಮರ್ಥನೆ ಮಾಡಲು ಹೋಗಿ ಖಾದರ್ ಅವರು ಬೆತ್ತಲಾಗಿದ್ದಾರೆ. ಕಮಿಷನರ್ ಅವರೇ ಸುದ್ದಿಗೋಷ್ಠಿ ಮಾಡಿ ಫಾಜಿಲ್ ಸಹೋದರ ಆದಿಲ್ ಸುಪಾರಿ ಕೊಟ್ಟ ವಿಚಾರ ಹೇಳಿದ್ದಾರೆ. ಸ್ಪೀಕರ್ ಖಾದರ್ (U T Khader) ಅವರಿಗೆ ಮಂಗಳೂರು ಕಮಿಷನರ್ ಅವರೇ ಕಪಾಳಮೋಕ್ಷ ಮಾಡಿದ್ದಾರೆ. ಖಾದರ್ ಈಗ ತಪ್ಪಿತಸ್ಥ ಸ್ಥಾನದಲ್ಲಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಖಾದರ್ ಪ್ರಯತ್ನ ಪಟ್ಟಿದ್ದಾರೆ. ಅವರಿಗೆ ಸತ್ಯ ಏನು ಅಂತ ಗೊತ್ತಿದೆ. ಸರ್ಕಾರವು ಕೂಡಲೇ ಖಾದರ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.