– ಸಾಬೀತು ಮಾಡಿದವ್ರಿಗೆ ಸ್ವಂತ ಸಂಬಳದಿಂದ 1.1 ಲಕ್ಷ ರೂ. ಬಹುಮಾನ ಘೋಷಣೆ
ಬೆಂಗಳೂರು: ಅಂಬೇಡ್ಕರ್‌ರನ್ನ ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಎಂದು ಸಾಬೀತು ಪಡಿಸಿದರೆ ನಾನು ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalvadi Narayanaswamy) ಹೇಳಿದರು.
ಅಂಬೇಡ್ಕರ್‌ರನ್ನು (Dr.B.R.Ambedkar) ಸೋಲಿಸಿದ್ದು ಕಮ್ಯೂನಿಸ್ಟ್ ಪಕ್ಷದ ಡಾಂಗೇ ಮತ್ತು ಸಾವರ್ಕರ್ ಎಂಬ ಖರ್ಗೆಯವರ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಬಗ್ಗೆ ಈಗಾಗಲೇ ಜೈರಾಮ್ ರಮೇಶ್, ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಹಾಗೂ ಈಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ. ಈ ನಾಲ್ವರೂ ಅಂಬೇಡ್ಕರ್‌ರನ್ನ ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಅನ್ನೋದನ್ನು ಸಾಬೀತು ಪಡಿಸಲಿ. ಅವರು ಸಾಬೀತು ಪಡಿಸಿದರೆ ನಾನು ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ. ಅಷ್ಟೇ ಅಲ್ಲ, ಸಾಬೀತು ಮಾಡಿದವರಿಗೆ ನನ್ನ ಸ್ವಂತ ಸಂಬಳದಿಂದ 1 ಲಕ್ಷದ ಒಂದು ರೂ. ಬಹುಮಾನ ಕೊಡ್ತೇನೆ. ಇಲ್ಲದಿದ್ದರೆ ಜೈರಾಮ್ ರಮೇಶ್, ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ(Siddaramaiah), ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ಕೊಡ್ತಾರಾ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನ ಸರ್ಕಾರವೇ ಟಾರ್ಗೆಟ್ ಮಾಡುತ್ತಿದೆ: ಛಲವಾದಿ ಕಿಡಿ
ಒಳ ಮೀಸಲಾತಿ ಮಾಡುವ ಯೋಗ್ಯತೆ ಇಲ್ಲ. ಮಾಡುವಂತ ಮೋಸಕ್ಕೆ ಜನರು ನಿಮಗೆ ಬುದ್ಧಿ ಕಲಿಸ್ತಾರೆ. ಅಂಬೇಡ್ಕರ್‌ಗೆ ಗೌರವ ಸಿಕ್ಕಿದ್ದು ಬಿಜೆಪಿಯವರಿಂದ, ಅವರು ಸತ್ತಾಗ ಆರಡಿ ಮೂರಡಿ ಜಾಗವನ್ನು ಕೊಟ್ಟಿಲ್ಲ. ಕಾಂಗ್ರೆಸ್‌ನವರು (Congress) ಸತ್ತಾಗ ನೂರಾರು ಎಕ್ರೆ ಜಾಗ ಕೊಟ್ಟಿದ್ದೀರಾ. ದೇಶದ ದಲಿತರ ಅಗ್ರಗಣ್ಯ ನಾಯಕರಂತೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ರಬ್ಬರ್ ಸ್ಟ್ಯಾಂಪ್ ಆಗಿ ಕೂತಿದ್ದೀರಿ. ಎಐಸಿಸಿ ಅಧ್ಯಕ್ಷರೇ ನೀವು ಇನ್ನೂ ಗುಲಾಮಗಿರಿ ಮಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮದ್ವೆ ಮನೆಯಲ್ಲಿ ಆರ್‌ಸಿಬಿ ಮ್ಯಾಚ್ – ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಕೆಪಿಎಸ್‌ಸಿ ಪರೀಕ್ಷಾರ್ಥಿಗಳು ಮಧ್ಯರಾತ್ರಿ 12 ಗಂಟೆವರೆಗೆ ಬಂದು ಅಡ್ಮಿಷನ್ ಟಿಕೆಟ್ ತಗೊಳ್ಳಿ ಎಂದು ಎಲ್.ಕೆ.ಅತೀಕ್ ಸಭೆಯಲ್ಲಿ ಹೇಳಿದ್ದಾರಂತೆ. ಕೆಪಿಎಸ್‌ಸಿಗೂ ಅತೀಕ್ ಅವರಿಗೂ ಏನು ಸಂಬಂಧ? ಅತೀಕ್ ಎಲ್ಲರದರಲ್ಲೂ ಮೂಗು ತೂರಿಸ್ತಾರೆ ಅಂತ ಅಧಿಕಾರಿಗಳೇ ಹೇಳ್ತಾರೆ. ಸಿಎಂಗೆ ಅತೀಕ್ ಮೇಲೆ ಬಹಳ ಪ್ರೀತಿ. ಅತೀಕ್ ಅವರಿಗೇ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟುಬಿಡಿ. ಆಗ ಎಲ್ಲದರಲ್ಲೂ ಅವರು ಮೂಗು ತೂರಿಸೋದು ನಿಲ್ಲುತ್ತದೆ ಎಂದು ಹೇಳಿದರು.