ಬೆಂಗಳೂರು: ಅಂಬೇಡ್ಕರ್ (B.R Ambedkar) ಅವರ ಹೆಸರು ಹಾಗೂ ಸಂವಿಧಾನದಲ್ಲೂ ರಾಮ ಇದ್ದಾನೆ. ದೇವಸ್ಥಾನಕ್ಕೆ ಯಾಕೆ ನಮ್ಮನ್ನ ಬಿಡಲ್ಲ ಎಂದು ಅಂಬೇಡ್ಕರ್ ಕೇಳಿದ್ದರು. ದೇವರ ಮೇಲೆ ನಂಬಿಕೆ ಇದ್ದಿದ್ದರಿಂದಲೇ ಅವರು ಹಾಗೆ ಪ್ರಶ್ನಿಸಿದ್ದರು ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ನಗರದ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರ – ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ
ಕಾಂಗ್ರೆಸ್ (Congress) ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಮನಬಂದಂತೆ ಟೀಕಿಸುತ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ವಿರೋಧಿಸಿದ್ದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು ಇದನ್ನು ನಾನು ಮೆಚ್ಚುತ್ತೇನೆ.
ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಪ್ರಿಯಾಂಕ್ ಖರ್ಗೆ ಮನಬಂದಂತೆ ಮಾತಾಡಿದ್ದಾರೆ. ಜನರೇ ಇದಕ್ಕೆ ಉತ್ತರ ಕೊಡುತ್ತಾರೆ. ಅವರೆಲ್ಲ ಶ್ರೀರಾಮನನ್ನು ಅವಹೇಳನ ಮಾಡಿದಾಕ್ಷಣ ದೊಡ್ಡ ನಾಯಕರಾಗ್ತಾರೆ ಎಂಬ ತಪ್ಪು ಭಾವನೆಯಲ್ಲಿದ್ದಾರೆ. ಪೊಸ್ಟರ್ ಹಾಕಿದರೆ ಅದನ್ನ ಕತ್ತರಿಸ್ತಾರೆ. ಮಂತ್ರಾಕ್ಷತೆಯನ್ನು ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಿದೆ. ಕಾಂಗ್ರೆಸ್‍ನವರು ಅದನ್ನು ಬಿಸಾಡುವ ಕೆಲಸ ಮಾಡ್ತಿದ್ದಾರೆ. ಜನರಿಗೆ ಕೊಡುತ್ತಿರುವುದು ರಾಜ್ಯದ ಅಕ್ಕಿಯಲ್ಲ. ಮೋದಿ ಕೊಡುತ್ತಿರುವ ಅಕ್ಕಿ, ಜನರ ಕಿವಿ ಮೇಲೆ ಹೂವು ಇಡಬೇಡಿ ಡಿಕೆಶಿಯವರೇ ಎಂದಿದ್ದಾರೆ.
ಪ್ರಿಯಾಕೃಷ್ಣ ಅವರು 80 ಅಡಿ ರಾಮನ ಪೋಸ್ಟರ್ ಹಾಕಿದ್ದಾರೆ ಅದಕ್ಕೆ ಕತ್ತರಿ ಹಾಕಿದ್ದೀರಾ? ಎಲ್ಲರ ಹೃದಯದಲ್ಲಿ ರಾಮನಿದ್ದಾನೆ. ಪ್ರಿಯಾಕೃಷ್ಣ ಅವರ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿದೆ. ಪ್ರಿಯಾಂಕ್ ಖರ್ಗೆ ಮನೆಯಲ್ಲಿ ರಾಮನಾಮ ಹಾಗೂ ಹೊರಗಡೆ ರಹೀಮ ನಾಮ ಎಂದು ವ್ಯಂಗ್ಯವಾಡಿದ್ದಾರೆ.
ರಾಜಣ್ಣರ ಮೇಲೆ ಜನ ಗೌರವ ಇಟ್ಟುಕೊಂಡಿದ್ದಾರೆ. ಅವರು ಪ್ರಚೋದನಕಾರಿ ಮಾತಾಡೋದನ್ನು ಬಿಡಲಿ. ಜನ ಇಟ್ಟಿರುವ ಗೌರವ ಉಳಿಸಿಕೊಳ್ಳಿ. ಯೋಗಿ ಆದಿತ್ಯನಾಥ್ ಬಂದರೆ ಹೊಡೀರಿ ಎಂದಿದ್ದಾರೆ. ರಾಜಣ್ಣ ಅವರ ಈ ಹೇಳಿಕೆ ಪಕ್ಷದ ನಿಲುವಾ? ನಮ್ಮವರು ಮಾತಾಡಿದ್ರೆ ಅದು ಪಕ್ಷದ ನಿಲುವು, ನಿಮ್ಮೋರು ಮಾತಾಡಿದ್ರೆ ವೈಯಕ್ತಿಕನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮನ ಬಗ್ಗೆ ರಾಜಣ್ಣ ಅವಹೇಳನ; ಸಿಎಂ, ಸಚಿವ ಇಬ್ಬರೂ ಕ್ಷಮೆ ಕೇಳಲಿ: ಡಿವಿಎಸ್ ಆಗ್ರಹ