ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡ್ತೀವಿ ಎಂಬ ಯತ್ನಾಳ್ ಟೀಂನ ಕುಮಾರ್ ಬಂಗಾರಪ್ಪ (Kumar Bangarappa) ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ (BJP state president) ಸ್ಥಾನಕ್ಕೆ ಚುನಾವಣೆ ನಡೆದರೆ ಯಾರು ಬೇಕಾದ್ರು ಸ್ಪರ್ಧೆ ಮಾಡಲಿ. ಎಲ್ಲಿ ಚುನಾವಣೆ ಆಗುತ್ತದೆ. ಒಂದು ಚುನಾವಣೆ ಆದರೆ ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು. ಆದರಿಲ್ಲಿ ಚುನಾವಣೆ ಆಗೊಲ್ಲ. ಚುನಾವಣೆ ಆದರೆ ಸ್ಪರ್ಧೆ ಮಾಡ್ತೀವಿ ಅಂತ ಅವರು ಯಾಕೆ ಹೇಳಿದ್ರು ಅವರನ್ನೇ ಕೇಳಿ. ನಿನ್ನೆ ಇಲ್ಲ ಅಂದರು, ಇವತ್ತು ಸ್ಪರ್ಧೆ ಮಾಡ್ತೀವಿ ಅಂತ ಹೇಳೋಕೆ ಯಾರು ಪ್ರಚೋದನೆ ಮಾಡಿದ್ರು ಅಂತ ಅವರನ್ನ ಕೇಳಿ ಎಂದು ಕುಟುಕಿದರು. ಇದನ್ನೂ ಓದಿ: ಕಿಡಿಗೇಡಿಗಳು ಒಣಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಚಾಮುಂಡಿಬೆಟ್ಟದಲ್ಲಿ 35 ಎಕ್ರೆ ಅರಣ್ಯ ನಾಶವಾಗಿದೆ: ಡಿಸಿಎಫ್
ನೂರಕ್ಕೆ ನೂರು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ ಎಂಬ ಕುಮಾರ್ ಬಂಗಾರಪ್ಪ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಅದನ್ನ ಆ ಬಣದವರು ಹೇಳಿದ್ರೆ ಆಗೋದಿಲ್ಲ. ಹೈಕಮಾಂಡ್ ನಾಯಕರು ಹೇಳಬೇಕು ಎಂದರು. ಇದನ್ನೂ ಓದಿ: ಹೈಕಮಾಂಡ್ ನನ್ನನ್ನು ಪರಿಗಣಿಸಿದ್ರೆ ರಾಜ್ಯಾಧ್ಯಕ್ಷ ಆಗೋಕೆ ಸಿದ್ಧ: ಕುಮಾರ್ ಬಂಗಾರಪ್ಪ