– ಓಲೈಕೆ ಕಾರಣದಿಂದ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆ
ಬೆಂಗಳೂರು: ಗಾಡ್, ಗಾಡ್ಸ್ ಗ್ರೇಸ್, ಗಾಡ್ ಬ್ಲೆಸ್ ಯು ಎಂದು ಕೆಲವು ನಾಯಕರ ದೇಹದ ಮೇಲೆ ಬರೆದುದನ್ನು ಪ್ರತಿಭಟಿಸಿ ಸುಮಾರು 800 ಜನರು ಮೈಸೂರಿನಲ್ಲಿ (Mysuru) ಪೊಲೀಸ್ ಠಾಣೆಗೆ ನುಗ್ಗಿ ಡಿಸಿಪಿ ವ್ಯಾನ್‍ಗೆ ಬೆಂಕಿ ಹಚ್ಚಿದ್ದಾರೆ. ಸರ್ಕಾರ ಬದುಕಿದೆಯೇ? ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಇದೆ ಎಂದು ಒಪ್ಪಿಕೊಳ್ಳಬೇಕೇ? ಎಂದು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
Advertisement
ಬೆಂಗಳೂರಿನಲ್ಲಿ (Bengaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕೆಜಿ ಹಳ್ಳಿ ಘಟನೆಯಲ್ಲಿ ಹತ್ತಾರು ವಾಹನ ಸುಟ್ಟು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಆದರೆ ನೀವು ಅನೇಕರನ್ನು ಕೇಸ್‌ನಿಂದ ಕೈ ಬಿಡಲು ಮುಂದಾದಿರಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವೇಷದಲ್ಲಿ ಆರ್‌ಎಸ್‍ಎಸ್, ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ – ಹೊಸ ಬಾಂಬ್ ಸಿಡಿಸಿದ ಎಂ.ಲಕ್ಷ್ಮಣ್
Advertisement
ಹುಬ್ಬಳ್ಳಿಯಲ್ಲೂ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಕೇಸು ವಾಪಸ್ ಪಡೆಯಲಾಯಿತು. ಈ ಓಲೈಕೆ ಕಾರಣದಿಂದ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆಯಲ್ಲವೇ? ಕಾಂಗ್ರೆಸ್ ನಾಯಕತ್ವ, ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಇದಕ್ಕೆ ಕಾರಣವಲ್ಲವೇ? ನಿಮ್ಮ ಓಲೈಕೆ ರಾಜ್ಯದ ಜನರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಬಸ್ ಪ್ರಯಾಣ ದರ, ಮೆಟ್ರೋ ಪ್ರಯಾಣ ದರ ಹೆಚ್ಚಳದ ವಿಚಾರವಾಗಿ, ರಾಜ್ಯ ಸರ್ಕಾರವು ಬರಿಯ ಸುಳ್ಳು ಹೇಳುತ್ತಿದೆ. ಜನರ ಪೂರ್ತಿ ತಲೆ ಬೋಳಿಸಿದ್ದೀರಿ. ಇನ್ನೇನೂ ಬೋಳಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಒಂದು ಕಾಸಿನ ಅಭಿವೃದ್ಧಿ ಇಲ್ಲ; ಅಭಿವೃದ್ಧಿಗೆ ಹಣವೂ ಇಲ್ಲ
ರಾಜ್ಯದಲ್ಲಿ ಒಂದು ಕಾಸಿನ ಅಭಿವೃದ್ಧಿ ಇಲ್ಲ, ಅಭಿವೃದ್ಧಿಗೆ ಹಣವೂ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಇಡೀ ರಾಜ್ಯ ಲೂಟಿ ಮಾಡುತ್ತಿರುವಂತಿದೆ. ಎಲ್ಲದರ ಬೆಲೆ ಏರಿಸುತ್ತಿದ್ದಾರೆ. ಇಷ್ಟಾದರೂ ಅವರ ದರಿದ್ರ ತಪ್ಪಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ. ಮಂತ್ರಿಗಳು, ಶಾಸಕರು ಸೇರಿ ಪುಂಡಾಟಿಕೆಯಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಆಗದುದನ್ನು ಮರೆಮಾಚಲು, ಗುಂಪುಗಾರಿಕೆ, ಅಧಿಕಾರ ದಾಹ, ಒಳಜಗಳ ಮರೆಮಾಚುವ ಉದ್ದೇಶದಿಂದ ಚರಿತ್ರೆ ತಿದ್ದುವ ಕೆಲಸ ನಡೆದಿದೆ. ರಾಮಾಯಣ, ವಾಲ್ಮೀಕಿ, ಕುಂಭಮೇಳ ಕುರಿತು ಮಾತನಾಡುತ್ತಿದ್ದು, ನಾಲಿಗೆ ಹೊಲಸು ಮಾಡಿಕೊಳ್ಳುತ್ತಿದ್ದಾರೆ. ಒಂದು ದಿನ ಮಾತ್ರೆ, ಇಂಜೆಕ್ಷನ್ ಕೊಡದ ಮಹದೇವಪ್ಪ ಅವರು ಡಾಕ್ಟರ್ ಆಗಿದ್ದಾರೆ. ಇತರರೂ ಪಿಹೆಚ್‍ಡಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಡಾಕ್ಟರ್ ಪ್ರಿಯಾಂಕ್ ಖರ್ಗೆ ಪಿಹೆಚ್‍ಡಿ ಮಾಡಿದ್ದಾರಾ? ಅವರ ಶಿಕ್ಷಣ ಎಲ್ಲರಿಗೂ ಗೊತ್ತಾಗಿದೆ. ವಾಲ್ಮೀಕಿ ರಾಮಾಯಣದ ಬಗ್ಗೆಯೂ ಹೇಳಿದ್ದಾರೆ. ಆ ರಾಮಾಯಣ ಬೇರೆಯಂತೆ, ಈ ರಾಮಾಯಣ ಬೇರೆ ಅಂತೆ. ಹನುಮಾನ್ ಚಾಲೀಸ ಗೊತ್ತಾ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಅವರ ಕಚೇರಿ ಮುಂದೆ ಜನರು ವಿಷ ತೆಗೆದುಕೊಳ್ಳಲು ಹೋಗಿದ್ದರು. 400 ಕೋಟಿ ರೂ. ಬಾಕಿ ಸಂಬಂಧ ವೆಂಡರ್ಸ್ ಅಸೋಸಿಯೇಶನ್‍ನವರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ದುಡ್ಡು ಕೊಡುವುದು ಬಿಟ್ಟು ಇವರು ರಾಮಾಯಣ ಕಲಿಸಲು ಹೋಗುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಾಲ್ಮೀಕಿ ನಿಗಮ ಬರಿದು ಮಾಡಿದ್ದಾರೆ. ನಾಲಿಗೆ ಬರುವಷ್ಟು ಆಚೆಗೆ ಹಾಕಿ ನೆಕ್ಕಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಹೆಸರು ಹೇಳಲು ನಿಮಗೆ ಯೋಗ್ಯತೆ ಇದೆಯೇ? ಹಣ ದೋಚಿದ ನಿಮಗೆ ನಾಚಿಕೆ ಆಗುವುದಿಲ್ಲವೇ? ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇಎಂದಿದ್ದೀರಿ. ಹಿಂದುತ್ವದಲ್ಲಿ ನಂಬಿಕೆ ಇಲ್ಲದ ನೀವು ಯಾಕೆ ರಾಮಾಯಣ, ಮಹಾಭಾರತದ ಬಗ್ಗೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮತಾಂಧರ ವಿರುದ್ಧದ ಪ್ರಕರಣ ವಾಪಸ್‌ನಿಂದ ಪೊಲೀಸರ ಮೇಲೆ ಹಲ್ಲೆ ಮಾಡುವ ಧೈರ್ಯ: ಆರ್.ಅಶೋಕ್ ಕಿಡಿ