– ಬೆಂಗಳೂರು ಅಭಿವೃದ್ಧಿ ಮಾಡೋಕೆ ಆಗಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ವಾಗ್ದಾಳಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ರೇಟರ್ ಬೆಂಗಳೂರು ಪ್ರಸ್ತಾಪಕ್ಕೆ ಬಜೆಪಿ ವಿರೋಧ ಮಾಡಿದೆ. ಈ ಸಂಬಂಧ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ನಡೆ ಖಂಡಿಸಿದರು.
Advertisement
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಬಿಎಂಪಿ ಚುನಾವಣೆ ಅಗಬೇಕಿತ್ತು. ಹೀಗೆ ಚುನಾವಣೆ ಮುಂದೂಡೋದ್ರಿಂದ ಪ್ರಜಾಪ್ರಭುತ್ವಕ್ಕೆ ಚ್ಯುತಿ ಬರುತ್ತದೆ. ಬ್ರ್ಯಾಂಡ್ ಬೆಂಗಳೂರು ಅಂದೋರು ಈಗ ಯಾಕೆ ಗ್ರೇಟರ್ ಬೆಂಗಳೂರು ಅಂತಿದ್ದೀರಾ. ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು ಗ್ರೇಟರ್ ಬೆಂಗಳೂರು ಮಾಡ್ತಾರಾ ಎಂದು ಪ್ರಶ್ನಿಸಿದರು.
Advertisement
ಇದು ಸರಿಯಾದ ಕ್ರಮ ಅಲ್ಲ. ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡ ಕಟ್ಟಿದ ಬೆಂಗಳೂರನ್ನ ಛಿದ್ರ ಮಾಡೋಕೆ ಕಾಂಗ್ರೆಸ್ ಹೊರಟಿದೆ. ಬೆಂಗಳೂರನ್ನ ಒಗ್ಗಟ್ಟಾಗಿ ಇಡೋ ಕೆಲಸ ಆಗಬೇಕು. ವಿಚಿತ್ರಕಾರಿ ಜನ ಬೆಂಗಳೂರಿಗೆ ಬಂದು ಹಾಳು ಮಾಡಿದ್ದು ಆಯ್ತು. ಬೆಂಗಳೂರನ್ನ ಸುಭದ್ರಗೊಳಿಸಬೇಕು. ಅದು ಬಿಟ್ಟು 6, 7 ಭಾಗ ಮಾಡ್ತೀವಿ. 6 ಮೇಯರ್ ಮಾಡ್ತೀವಿ ಅನ್ನೋದು ಸರಿಯಲ್ಲ. ಗ್ರೇಟರ್ ಬೆಂಗಳೂರಿಗೆ ನಮ್ಮ ವಿರೋಧ ಇದೆ ಎಂದರು.
Advertisement
ದೇವರೇ ಬಂದರು ಬೆಂಗಳೂರು ಅಭಿವೃದ್ಧಿ ಮಾಡೋಕೆ ಆಗಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೈಲಾಗದವರು ಮೈ ಪರಚಿಕೊಂಡ ರೀತಿ ಇವರದ್ದು ಆಗಿದೆ. ಬೆಂಗಳೂರನ್ನ ಹಾಗೆ ಮಾಡ್ತೀವಿ ಹೀಗೆ ಮಾಡ್ತೀವಿ ಅಂತ ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ಇವರು.ಅವರು ಕೊಟ್ಟ ಗ್ಯಾರಂಟಿಗೆ ವಾರಂಟಿ ಇಲ್ಲದ ಹಾಗೇ ಆಗಿದೆ.ಇವರು ನಮ್ಮನ್ನ ಗ್ಯಾರಂಟಿ ಒಂದೇ ಕಾಪಾಡುತ್ತೆ ಅಂತ ಅಂದುಕೊಂಡಿದ್ದಾರೆ. ದೇವರು ಬಂದರೂ ಅಭಿವೃದ್ಧಿ ಮಾಡೋಕೆ ಆಗಲ್ಲ ಅಂದರೆ ನೀವು ಯಾಕೆ ಅಧಿಕಾರದಲ್ಲಿ ಇದ್ದೀರಾ? ಅಧಿಕಾರ ಬಿಟ್ಟು ತೊಲಗಿ ಹೋಗಿ. ರಾಜೀನಾಮೆ ಕೊಟ್ಟುಬಿಡಿ. ಇಷ್ಟು ದಿನ ಬೆಂಗಳೂರನ್ನ ನೀವೇ ಕಾಪಾಡಿರೋದಾ? ನಿಮ್ಮಿಂದ ಆಗಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಿ ಅಂತ ಕಾಂಗ್ರೆಸ್ ವಿರುದ್ದ, ಡಿಕೆಶಿ ವಿರುದ್ದ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು