ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಿಡಿದೆದ್ದಿದ್ದಾರೆ.
ಹಿಂದೂಗಳ ಹತ್ಯೆಗಳಿಗೆ ಆಕ್ರೋಶ ವ್ಯಕ್ತಪಡಿಸಿ `ಆಕ್ರೋಶದ ನಮಸ್ಕಾರ’ ಎನ್ನುತ್ತಲೇ ಭಾವನಾತ್ಮಕವಾಗಿ ಸೂಲಿಬೆಲೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸೂಲಿಬೆಲೆ ಮಾತನಾಡಿದ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಆಡಿಯೋದಲ್ಲೇನಿದೆ?: ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು. ನಿಮ್ಮ ಆಳ್ವಿಕೆಯ 5 ವರ್ಷ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ನೀವು ಕನ್ನಡಿಗರ ಬದುಕನ್ನು ಅಸಹ್ಯಗೊಳಿಸಿಬಿಟ್ಟಿದ್ದೀರಿ. ನಿಮ್ಮ ಸಾಮಾಜ್ಯದಲ್ಲಿ ಮಧ್ಯರಾತ್ರಿ ತರುಣಿಯರು ಬಿಡಿ, ತರುಣರು ನಡೆದಾಡುವುದು ಕಷ್ಟವಾಗಿಬಿಟ್ಟಿದೆ. ನೀವು ಆಳ್ತಾ ಇರೋ ಈ ನಾಡಿನಲ್ಲಿ ಗೋವಿನಂತ ಪಶುಗಳಿಗೇನು… ಸಿಂಹದಂತಹ ತರುಣರಿಗೂ ಬದುಕಿನ ಭೀತಿ ಶುರುವಾಗಿದೆ.
Advertisement
Advertisement
ರುದ್ರೇಶ್, ರಾಜು, ಕುಟ್ಟಪ್ಪ, ಪರೇಶ್ ಮೇಸ್ತಾ ಅನಾಥ ಶವವಾದರು. ದೀಪಕ್ ಎಂದಿಗೂ ಗಲಾಟೆಗೆ ಹೋದವನಲ್ಲ. ಅಂತವನು ಬರ್ಬರವಾಗಿ ಕೊಲೆಯಾದ. ಕುಡಿದ ಅಮಲಿನಲ್ಲಿ ತೂರಾಡಿದ್ದರೆ, ವೇಗವಾಗಿ ಬೈಕ್ ಓಡಿಸಿ ರಸ್ತೆಗೆ ರಕ್ತ ಚೆಲ್ಲಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ. ಆದರೆ ಇವರೆಲ್ಲಾ ಕೇಸರಿ ಶಾಲು ಧರಿಸಿದ್ದವರೆಂಬ ಕಾರಣಕ್ಕೆ ಹೆಣವಾದವರು. ಹೇಳಿ ಇಂತಹ ವೀರಪುತ್ರರ ಸಾವನ್ನು ನೀವು ತುಚ್ಛವಾಗಿ ಕಂಡು, ವ್ಯಂಗ್ಯವಾಗಿ ಹೀಯಾಳಿಸಿದ್ದು ಸರಿಯಾ? ಇದನ್ನು ಓದಿ: ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’: ಅಂಕಣದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ
Advertisement
ನೀವು ಹಾಗೇ ಹೇಳುವಾಗ ಆ ಮಕ್ಕಳ ತಾಯಂದಿರ ಹೃದಯದ ವೇದನೆ ಹೇಗಿರಬಹುದೆಂಬ ಅಂದಾಜು ಆದ್ರೂ ನಿಮಗಿತ್ತೇನೋ.? ಇಲ್ದೇ ಏನೂ, ಮಕ್ಕಳನ್ನು ಕಳಕೊಳ್ಳೋ ದುಃಖ ನಿಮಗೂ ಗೊತ್ತು. ಆದರೆ ಕುರ್ಚಿಗಾಗಿ ಓಡುತ್ತಾ ರಾಜಕೀಯ ದಾಳಗಳನ್ನೆಸೆಯೋ ಭರದಲ್ಲಿ ನೀವು ದುಃಖವನ್ನು ಸಮಾಧಿ ಮಾಡಿ ಮುನ್ನುಗ್ಗಿಬಿಟ್ಟಿದ್ದೀರಿ. ನಿಮ್ಮ ಸಾಹಸ ಮೆಚ್ಚಲೇಬೇಕು. ಆದ್ರೆ ಇಂದು ಸಂಜೆ ಮನೆಗೆ ಹೋದೊಡನೆ ನಿಮ್ಮ ಪತ್ನಿಯ ಕಂಗಳನ್ನು ಕಣ್ಣಿಟ್ಟು ನೋಡಿ. ಹಿರಿಮಗನನ್ನು ಕಳೆದುಕೊಂಡ ಆ ದುಃಖದ ಜ್ವಾಲೆ ಆರಿದ್ಯಾ ಆಂತಾ ಗಮನಿಸಿ. ಮಗನನ್ನು ಕಳಕೊಂಡ ಆಕೆಯೊಳಗಿನ ನೋವು ಇಂಗಿದ್ಯಾ ಅಂತಾ ಹೃದಯದೊಳಗೆ ಇಣುಕಿ ನೋಡಿ.
ಬಹುಶಃ ಆಕೆಗೆ ಮಾತ್ರ ಇನ್ನೊಬ್ಬ ತಾಯಿಯ ದುಃಖ ಗೊತ್ತಾಗಬಹುದೇನೋ. ನೆನಪಿಡಿ ಎಲ್ಲಾ ಪಾಪದ ಕೊಡ ನಿಮ್ಮ ಹೆಗಲ ಮೇಲಿದೆ. ನೀವು ರಕ್ಷಿಸ್ತೀರಿ ಅನ್ನೋ ಭರವಸೆಯಲ್ಲಿ ಎಲ್ಲಾ ಜಿಹಾದಿಗಳು ಕತ್ತಿ ಹಿಡಿದು ಮುನ್ನುಗ್ತಾ ಇರೋದು. ದೀಪಕ್‍ನ ಕೊಲೆಯಾದಾಗಿನಿಂದ ನನ್ನಮ್ಮನೂ ಕರೆ ಮಾಡುತ್ತಿದ್ದಾಳೆ. ನೆನಪಿರಲಿ ನೊಂದ ಹೃದಯದ ಶಾಪ ನಿಮಗೆ ತಟ್ಟಲಿದೆ. ಮಕ್ಕಳನ್ನು ಕಳಕೊಂಡವರ ನೋವು ನಿಮ್ಮನ್ನು ಸುಡಲಿದೆ. ಹೆತ್ತವರ ಶಾಪದಿಂದ ಪಾರಾಗುವ ಶಕ್ತಿಯನ್ನು ಭಗವಂತ ನಿಮಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.